ಕರ್ನಾಟಕ

karnataka

ETV Bharat / sports

ಧೋನಿ ಟೆಸ್ಟ್​ ನಾಯಕತ್ವದ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್​ ವಿರಾಟ್​

ಈಗಾಗಲೇ ಭಾರತದ ಪರ ನಾಯಕನಾಗಿ 58 ಪಂದ್ಯಗಳನಲ್ಲಿ ಮುನ್ನಡೆಸಿರುವ ಕೊಹ್ಲಿ ಅದರಲ್ಲಿ 34 ಗೆಲುವು ಸಾಧಿಸಿ ಭಾರತದ ಯಶಸ್ವಿ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 2ನೇ ಟೆಸ್ಟ್​ ಗೆಲ್ಲುವ ಮೂಲಕ ತವರಿನಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆಯನ್ನ ಸರಿಗಟ್ಟಿದ್ದರು.

ಭಾರತ vs ಇಂಗ್ಲೆಂಡ್ ಟೆಸ್ಟ್​
ವಿರಾಟ್​ ಕೊಹ್ಲಿ

By

Published : Feb 22, 2021, 6:20 PM IST

ಅಹಮದಾಬಾದ್​: ಚೆನ್ನೈನಲ್ಲಿ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯ ಗೆದ್ದು ಭಾರತದ ಪರ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿ ಕೊಂಡಿರುವ ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮುಂದಿನ ಅಹರ್ನಿಶಿ ಟೆಸ್ಟ್​ ಪಂದ್ಯವನ್ನು ಗೆದ್ದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಈಗಾಗಲೇ ಭಾರತದ ಪರ ನಾಯಕನಾಗಿ 58 ಪಂದ್ಯಗಳನಲ್ಲಿ ಮುನ್ನಡೆಸಿರುವ ಕೊಹ್ಲಿ ಅದರಲ್ಲಿ 34 ಗೆಲುವು ಸಾಧಿಸಿ ಭಾರತದ ಯಶಸ್ವಿ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 2ನೇ ಟೆಸ್ಟ್​ ಗಲ್ಲುವ ಮೂಲಕ ತವರಿನಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆಯನ್ನ ಸರಿಗಟ್ಟಿದ್ದರು.

ಧೋನಿ ಒಟ್ಟಾರೆ 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 27 ಜಯ ಹಾಗೂ 18 ಸೋಲು ಕಂಡಿದ್ದಾರೆ. ಆದರೆ, ತವರಿನಲ್ಲಿ 30 ಪಂದ್ಯ ಮುನ್ನಡೆಸಿದ್ದು, 21ರಲ್ಲಿ ಗೆಲುವು ಸಾಧಿಸಿ ಕೇವಲ 3ರಲ್ಲಿ ಮಾತ್ರ ಸೋಲು ಕಂಡಿದ್ದಾರೆ. ಉಳಿದ ಆರು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ವಿರಾಟ್ ಕೊಹ್ಲಿ ಭಾರತದಲ್ಲಿ 28 ಪಂದ್ಯಗಳಲ್ಲಿ ನಾಯಕನಾಗಿದ್ದು, ಇದರಲ್ಲಿ ಭಾರತ ತಂಡ 21 ಪಂದ್ಯ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ಐದು ಪಂದ್ಯಗಳು ಡ್ರಾ ಆಗಿವೆ. ಇದೀಗ ಫೆಬ್ರವರಿ 24ರಂದು ಅಹರ್ನಿಶಿ ಟೆಸ್ಟ್​ ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆದ್ದರೆ ಕೊಹ್ಲಿ ತವರಿನಲ್ಲಿ ಹೆಚ್ಚು ಜಯ ಸಾಧಿಸಿದ ನಾಯಕ ಮತ್ತು ಒಟ್ಟಾರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಸಾರ್ವಕಾಲಿಕ ಅತ್ಯುತ್ತಮ ನಾಯಕ ಎಂಬ ಶ್ರೇಯಕ್ಕೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ.

ಇದನ್ನು ಓದಿ:ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಮೊದಲ ದಿನವೇ ಪಿಚ್​ ಟರ್ನಿಂಗ್ ಕಾಣಲಿದೆ: ಖಚಿತಪಡಿಸಿದ ರೋಹಿತ್​

ABOUT THE AUTHOR

...view details