ಕರ್ನಾಟಕ

karnataka

ETV Bharat / sports

00000000W! ತಂಡದಲ್ಲಿ ಬೂಮ್​ ಬೂಮ್​​ ಬುಮ್ರಾ ಇದ್ದರೆ ಎಲ್ಲವೂ ಸಾಧ್ಯ!

ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ಬೌಲರ್​ ಜಸ್​ಪ್ರೀತ್ ಬುಮ್ರಾ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಮೊದಲೆರಡು ಓವರ್​ಗಳಲ್ಲಿ ಕರಾರುವಾಕ್ ದಾಳಿ ಮಾಡಿದ್ದಾರೆ.

ಜಸ್​​ಪ್ರೀತ್​ ಬುಮ್ರಾ

By

Published : Jul 9, 2019, 4:46 PM IST

Updated : Jul 9, 2019, 4:59 PM IST

ಮ್ಯಾಂಚೆಸ್ಟರ್​​​:ಟೀಂ ಇಂಡಿಯಾ ಯಾರ್ಕರ್​ ಸ್ಪೆಷಲಿಸ್ಟ್​​​ ಜಸ್​ಪ್ರೀತ್ ಬುಮ್ರಾ ತಂಡದಲ್ಲಿದ್ದರೆ ಸಾಕು, ಎದುರಾಳಿ ತಂಡದ ಬ್ಯಾಟ್ಸ್​​ಮನ್​ಗಳಲ್ಲಿ ನಡುಕ ಶುರುವಾಗಿ ಬಿಡುತ್ತದೆ. ಇಂದಿನ ಪಂದ್ಯದಲ್ಲೂ ಅಂತಹ ಘಟನೆಯೊಂದು ನಡೆದಿದೆ.

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಭಾರತ-ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಿದ್ದು, ಟಾಸ್​ ಗೆದ್ದ ಕಿವೀಸ್ ತಂಡ ಬ್ಯಾಟಿಂಗ್​ ಆಯ್ದುಕೊಂಡಿದೆ. ಆರಂಭಿಕರಾಗಿ ಬ್ಯಾಟ್​ ಮಾಡಲು ಕಣಕ್ಕಿಳಿದಿದ್ದ ಹೆನ್ರಿ ನಿಕೋಲ್ಸ್ ಹಾಗೂ ಮಾರ್ಟಿನ್ ಗಪ್ಟಿಲ್​ಗೆ ಟೀಂ ಇಂಡಿಯಾ ಬೌಲರ್‌ಗಳು​ ಮಾರಕವಾಗಿ ಕಾಡಿದರು.

ಗಪ್ಟಿಲ್ ವಿಕೆಟ್ ಪಡೆದ ಸಂಭ್ರಮದಲ್ಲಿ ಜಸ್​​ಪ್ರೀತ್​ ಬುಮ್ರಾ

ಪ್ರಮುಖವಾಗಿ ಟೀಂ ಇಂಡಿಯಾದ ಬುಮ್ರಾ ಆರಂಭದಲ್ಲಿ ತಾವು ಎಸೆದ ಎರಡು ಓವರ್​​ಗಳಲ್ಲಿ (0 0 0 0 0 0 0 0 W 0 0 1) ಕೇವಲ 1ರನ್​ ನೀಡಿದ್ದಾರೆ. ಎರಡನೇ ಓವರ್​​ನ ಮೂರನೇ ಎಸೆತದಲ್ಲಿ ಗಪ್ಟಿಲ್​ ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅವರು ಮುಂದಿನ ಮೂರು ಎಸೆತಗಳಲ್ಲಿ ಕೇವಲ 1 ರನ್​ ನೀಡಿದ್ದಾರೆ. ಇಂದಿನ ಪಂದ್ಯದಲ್ಲಿ ಎದುರಾಳಿ ಬ್ಯಾಟ್ಸ್​ಮನ್​ ಇವರ ಓವರ್​ನಲ್ಲಿ ರನ್​ಗಳಿಸಲು ಹರಸಾಹಸ ಪಡುತ್ತಿರುವುದು ವಿಶೇಷ.

ಈ ವಿಶ್ವಕಪ್​​ನಲ್ಲಿ ಬುಮ್ರಾ ಒಟ್ಟು 9 ಮೆಡನ್ ಓವರ್​ ಎಸೆದಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಈ ಹಿಂದೆ ಸಹ ಟೀಂ ಇಂಡಿಯಾ ಒತ್ತಡಕ್ಕೊಳಗಾದ ಸಮಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿರುವ ಶ್ರೇಯ ಇವರಿಗೆ ಸಲ್ಲುತ್ತದೆ.

Last Updated : Jul 9, 2019, 4:59 PM IST

ABOUT THE AUTHOR

...view details