ಲಂಡನ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಮಂಡಿರಜ್ಜು(ಹ್ಯಾಮ್ಸ್ಟ್ರಿಂಗ್) ಗಾಯಕ್ಕೆ ತುತ್ತಾಗಿ ಎರಡು ಪಂದ್ಯಗಳ ವಿಶ್ರಾಂತಿಯಲ್ಲಿದ್ದ ರಾಯ್ ಆಸ್ಟ್ರೇಲಿಯಾ ವಿರುದ್ಧವೂ ಕಣಕ್ಕಿಳಿಯದಿರುವುದು ಇಂಗ್ಲೆಂಡ್ಗೆ ದೊಡ್ಡ ತಲೆನೋವು ತಂದಿದೆ.
ಇಂಗ್ಲೆಂಡ್ ತಂಡದ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದ ಜಾಸನ್ ರಾಯ್ ವಿಂಡೀಸ್ ವಿರುದ್ಧ ಗಾಯಗೊಂಡ ಕಾರಣ ಅಂದಿನ ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿದಿರಲಿಲ್ಲ. ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ ರಾಯ್ಗೆ ಎರಡು ಪಂದ್ಯಗಳ ವಿಶ್ರಾಂತಿ ನೀಡಲಾಗಿತ್ತು.
ರಾಯ್ ಅನುಪಸ್ಥಿತಿಯಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಹಾಗೂ ಶ್ರೀಲಂಕಾ ವಿರುದ್ಧ 20 ರನ್ಗಳ ರೋಚಕ ಸೋಲನಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ರಾಯ್ ಕಣಕ್ಕಿಳಿಯಬಹುದು ಎಂದುಕೊಂಡಿದ್ದ ಇಂಗ್ಲೆಂಡ್ಗೆ ರಾಯ್ ಅನುಪಸ್ಥಿತಿ ಕಾಡಲಿದೆ. ರಾಯ್ ಬದಲಿಗೆ ಅವಕಾಶ ಗಿಟ್ಟಿಸಿಕೊಂಡಿದ್ದ ಜೇಮ್ಸ್ ವಿನ್ಸ್ ಉತ್ತಮ ಆರಂಭ ನೀಡಲು ವಿಫಲರಾಗುತ್ತಿದ್ದಾರೆ.
ರಾಯ್ ಈ ವಿಶ್ವಕಪ್ನಲ್ಲಿ 3 ಪಂದ್ಯಗಳಿಂದ 215 ರನ್ಗಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ 153 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.