ಬೆಂಗಳೂರು:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ತಂಡದ ಪ್ಲೇಯರ್ಸ್ ಎದುರಾಳಿ ತಂಡದ ಪ್ಲೇಯರ್ಸ್ಗಳ ಆತ್ಮವಿಶ್ವಾಸ ಕುಗ್ಗಿಸಲು ಸ್ಲೆಡ್ಜಿಂಗ್ ಮಾಡುವುದು ಸರ್ವೆ ಸಾಮಾನ್ಯ. ಈ ಸಂಪ್ರದಾಯ ಇದೀಗ ದೇಶೀಯ ಕ್ರಿಕೆಟ್ಗೂ ಲಗ್ಗೆ ಇಟ್ಟಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನ ಇಂಡಿಯಾ ರೆಡ್ ತಂಡದ ವಿಕೆಟ್ ಕೀಪರ್ ಇಶನ್ ಕಿಶನ್ ಎದುರಾಳಿ ತಂಡ ಭಾರತ ಗ್ರೀನ್ನ ಮಯಾಂಕ್ ಮಾರ್ಕಂಡೆ ಅವರನ್ನ ಸ್ಲೆಡ್ಜ್ ಮಾಡಿದ್ದಾರೆ.
ಭಾರತ ಗ್ರೀನ್ ತಂಡ ಎದುರಾಳಿ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದಾಗ ಬ್ಯಾಟಿಂಗ್ ಮಾಡಲು ಬಂದ ಮಾರ್ಕಂಡೆ ಅವರ ಆತ್ಮಬಲ ಕುಗ್ಗಿಸುವ ನಿಟ್ಟಿನಲ್ಲಿ ವಿಕೆಟ್ ಕೀಪಿಂಗ್ ಮಾಡ್ತಿದ್ದ ಕಿಶನ್, ಬ್ಯಾಟ್ಸ್ಮನ್ ಕುರಿತು ಇತನ ಕೈಯಿಂದ ಅಷ್ಟೊಂದು ದೂರ ಚೆಂಡು ಹೋಗಲ್ಲ. ಅಷ್ಟೊಂದು ಶಕ್ತಿ ಇತನ ಬಳಿ ಇಲ್ಲ ಎಂದು ಹೇಳಿದ್ದು, ಅದು ಸ್ಟಪ್ನ ಮೈಕ್ನಲ್ಲಿ ಸೆರೆಯಾಗಿದೆ. ಈ ಮಾತು ಕೇಳಿಸಿಕೊಂಡಿರುವ ಮಾರ್ಕಂಡೆ ಮುಗುಳುನಗೆ ಬೀರಿದ್ದಾರೆ. ವಿಶೇಷವೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಶನ್ ಕಿಶನ್ ಹಾಗೂ ಮಯಾಂಕ್ ಮಾರ್ಕಂಡೆ ಮುಂಬೈ ಇಂಡಿಯನ್ಸ್ ತಂಡದಲ್ಲಿರುವುದು ಗಮನಾರ್ಹ ಸಂಗತಿ.
ಇನ್ನು ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ 49 ಓವರ್ ಆಗಿದ್ದಾಗ ಏಕಾಏಕಿ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಂಡಿದೆ. ಭಾರತ ಗ್ರೀನ್ 8ವಿಕೆಟ್ನಷ್ಟಕ್ಕೆ 147ರನ್ಗಳಿಕೆ ಮಾಡಿದೆ. ವೇಗಿ ಜೈದೇವ್ ಉನಾದ್ಕತ್ 4 ವಿಕೆಟ್ ಕಿತ್ತು ಮಿಂಚಿದರು. ಸ್ಪಿನ್ನರ್ ಮಯಾಂಕ್ ಮರ್ಕಂಡೆ 32 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.