ಕರ್ನಾಟಕ

karnataka

ETV Bharat / sports

ಡೆಲ್ಲಿ ತಂಡಕ್ಕೆ ಧವನ್ ಅದ್ಭುತ ಫಾರ್ಮ್ ದೊಡ್ಡ ಅನುಕೂಲವಾಗಲಿದೆ: ಗಂಭೀರ ವಿಶ್ವಾಸ ​ - ಶಿಖರ್ ಧವನ್ ಸೆಂಚುರಿ

ಧವನ್​ ಐಪಿಎಲ್​ನಲ್ಲಿ ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಅವರು ಸಿಎಸ್​ಕೆ ವಿರುದ್ಧ 106 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಜೇಯ 101 ರನ್​ಗಳಿಸಿದ್ದರು. ಅವರು ಒಟ್ಟಾರೆ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಸಹಿತ 471 ರನ್​ಗಳಿಸಿದ್ದಾರೆ.

ಶಿಖರ್ ಧವನ್ - ಗಂಭೀರ್
ಶಿಖರ್ ಧವನ್ - ಗಂಭೀರ್

By

Published : Oct 27, 2020, 6:34 PM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಅವರ ಉನ್ನತ ಫಾರ್ಮ್​ ಖಂಡಿತ ಶ್ರೇಯಸ್ ಬಳಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಆಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚೆಗೆ ಧವನ್​ ಐಪಿಎಲ್​ನಲ್ಲಿ ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಅವರು ಸಿಎಸ್​ಕೆ ವಿರುದ್ಧ 106 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಜೇಯ 101 ರನ್​ಗಳಿಸಿದ್ದರು. ಅವರು ಒಟ್ಟಾರೆ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಸಹಿತ 471 ರನ್​ಗಳಿಸಿದ್ದಾರೆ.

ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಧವನ್​ ಕೇವಲ 6 ರನ್​ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದರು.

"ಮೊದಲಿಗೆ ಹೇಳುವುದಾದರೆ, ಈ ದಾಖಲೆ(ಶತಕ ಸಿಡಿಸಿರುವುದು) ಬಹುದೊಡ್ಡ ಸಾಧನೆಯಾಗಿದೆ. ಯಾವುದೇ ಇತರ ಭಾರತೀಯ ಬ್ಯಾಟ್ಸ್​ಮನ್ ಈ ಸಾಧನೆಯನ್ನು ಮಾಡಿಲ್ಲ. ಯಾವುದೇ ಕ್ರಿಕೆಟಿಗನಿಂದಲೂ ಐಪಿಎಲ್‌ನಲ್ಲಿ ಈ ಸಾಧನೆ ದಾಖಲಾಗಿಲ್ಲ. ಸತತ ಎರಡು ಶತಕ, ಅದರಲ್ಲೂ ಟಿ20 ಮಾದರಿಯಲ್ಲಿ. ಅದಕ್ಕಿಂತಲೂ ಡೆಲ್ಲಿ ತಂಡ ಅಗ್ರಸ್ಥಾನಕ್ಕೇರುವ ಸಂದರ್ಭದಲ್ಲಿ ಆ ಎರಡು ಶತಕ ಬಂದಿರುವುದು ಇಲ್ಲಿ ಪ್ರಮುಖ ವಿಷಯವಾಗುತ್ತದೆ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

"ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಈ ಸಂದರ್ಭದಲ್ಲಿ ಅತ್ಯುತ್ತಮ ರೂಪದಲ್ಲಿರುವುದು ಡೆಲ್ಲಿ ತಂಡಕ್ಕೆ ಒಂದು ದೊಡ್ಡ ಅನುಕೂಲವಾಗಿದೆ. ತಂಡವು ಪ್ಲೇಆಫ್‌ ಪ್ರವೇಶಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ನಿಮ್ಮ ಓಪನರ್ ಎರಡು ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ದಾಖಲಿಸಿದ್ದಾರೆ. ಅದು ಕೇವಲ 69 ಮತ್ತು 57 ಎಸೆತಗಳಲ್ಲಿ ಎಂದರೆ ಇದು ಇದು ಡೆಲ್ಲಿ ಕ್ಯಾಪಿಟಲ್ಸ್​ಗೆ ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ ಮತ್ತು ಇದು ತಂಡಕ್ಕೆ ದೊಡ್ಡ ಅನುಕೂಲವಾಗಿದೆ "ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಿಂದ 4 ಸೋಲು ಮತ್ತು 7 ಗೆಲುವುಗಳೊಂದಿಗೆ 14 ಅಂಕವನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ABOUT THE AUTHOR

...view details