ಕರ್ನಾಟಕ

karnataka

ETV Bharat / sports

‘ಡ್ಯಾಡೀಸ್​ ಆರ್ಮಿ‘ ಸಿಎಸ್​ಕೆಗೆ ಸ್ಪಿನ್ನರ್​ಗಳೇ ಬಲ: 4ನೇ ಪ್ರಶಸ್ತಿ ಮೇಲೆ ಧೋನಿ ಬಳಗದ ಕಣ್ಣು - ಡ್ಯಾಡೀಸ್​ ಆರ್ಮಿ

ಒಟ್ಟಾರೆ 10 ಆವೃತ್ತಿಗಳಲ್ಲಿ ಸ್ಪರ್ಧಿಸಿರುವ ಚೆನ್ನೈ ಸೂಪರ್​ ಕಿಂಗ್ಸ್ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಪ್​ ಪ್ರವೇಶಿಸಿದ ಏಕೈಕ ತಂಡ ಎನಿಸಿಕೊಂಡಿದೆ. ಅಲ್ಲದೆ 8 ಬಾರಿ ಫೈನಲ್ ಪ್ರವೇಶಿಸಿದ್ದು 3 ಬಾರಿ ಚಾಂಪಿಯನ್​ ಆಗಿದೆ. ಎಂಎಸ್​ ಧೋನಿಯ ಅದ್ಭುತ ನಾಯಕತ್ವವನ್ನು ಹೊಂದಿರುವುದರಿಂದ ಸಿಎಸ್​ಕೆ ಪ್ರತಿಸ್ಪರ್ಧಿ ತಂಡಗಳಿಗೆ ಬೇಧಿಸಲಾಗದ ಕೋಟೆಯಾಗಿದೆ​

ಚೆನ್ನೈ ಸೂಪರ್​ ಕಿಂಗ್ಸ್​
ಚೆನ್ನೈ ಸೂಪರ್​ ಕಿಂಗ್ಸ್​

By

Published : Sep 13, 2020, 11:35 PM IST

ದುಬೈ: ಐಪಿಎಲ್​ನಲ್ಲಿ ಅತಿ ಹೆಚ್ಚು ಪ್ರೀತಿಸುವ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್​ ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ಒಟ್ಟಾರೆ 10 ಆವೃತ್ತಿಗಳಲ್ಲಿ ಸ್ಪರ್ಧಿಸಿರುವ ಚೆನ್ನೈ ಸೂಪರ್​ ಕಿಂಗ್ಸ್ ಎಲ್ಲಾ ಆವೃತ್ತಿಗಳಲ್ಲೂ ಪ್ಲೇಆಪ್​ ಪ್ರವೇಶಿಸಿದ ಏಕೈಕ ತಂಡ ಎನಿಸಿಕೊಂಡಿದೆ. ಅಲ್ಲದೆ 8 ಬಾರಿ ಫೈನಲ್ ಪ್ರವೇಶಿಸಿದ್ದು 3 ಬಾರಿ ಚಾಂಪಿಯನ್​ ಆಗಿದೆ. ಎಂಎಸ್​ ಧೋನಿಯ ಅದ್ಭುತ ನಾಯಕತ್ವವನ್ನು ಹೊಂದಿರುವುದರಿಂದ ಸಿಎಸ್​ಕೆ ಪ್ರತಿಸ್ಪರ್ಧಿ ತಂಡಗಳಿಗೆ ಬೇಧಿಸಲಾಗದ ಕೋಟೆಯಾಗಿದೆ​

ಚೆನ್ನೈ ಸೂಪರ್ ಕಿಂಗ್ಸ್​

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಎಂಎಸ್​ ಧೋನಿ ಈ ಆವೃತ್ತಿಯಲ್ಲಿ ತುಂಬಾ ಎಲ್ಲರ ಕೇಂದ್ರಿಕೃತ ವ್ಯಕ್ತಿಯಾಗಿದ್ದಾರೆ. ಒಂದು ವರ್ಷದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿರುವ ಮಿಸ್ಟರ್​ ಕೂಲ್​ ಮೈದಾನದಲ್ಲಿ ಸಿಕ್ಸರ್​ ಹೊಡೆಯುವುದನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಹೆಲಿಕಾಪ್ಟರ್ ಶಾಟ್​ಗಾಗಿ ಕೆಲವು ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದ್ದಾರೆ.

ಎಂಎಸ್​ ಧೋಮಿ -ಸ್ಯಾಂಟ್ನರ್​

ಇಷ್ಟು ವರ್ಷಗಳ ಕಾಲ ತಂಡದ ಆಧಾರ ಸ್ಥಂಭವಾಗಿದ್ದ ರೈನಾ ಅನುಪಸ್ಥಿತಿಯಲ್ಲಿ ಧೋನಿ ತಂಡವನ್ನು ಮುನ್ನಡೆಸಬೇಕಾದ ಅನುಪಸ್ಥಿತಿಯಿದೆ. ಆದರೆ ತಂಡದ ಸಹ ಆಟಗಾರರಾದ ಡ್ವೇನ್ ಬ್ರಾವೋ, ಮಾಲೀಕ ಎನ್ ಶ್ರೀನಿವಾಸನ್​ ಹಾಗೂ ಕೆಲವು ಕ್ರಿಕೆಟ್​ ದಿಗ್ಗಜರ ಪ್ರಕಾರ ಧೋನಿ ಎಲ್ಲವನ್ನು ನಿಭಾಯಿಸಲಿದ್ದಾರೆ ಎಂಬ ವಿಶ್ವಾಸದ ಮಾತು ಕೇಳಿ ಬರುತ್ತಿದೆ.

ರವೀಂದ್ರ ಜಡೇಜಾ

ತಂಡದ ಬಲ:

ಧೋನಿ ಸಿಎಸ್​ಕೆ ತಂಡದ ಬಹುದೊಡ್ಡ ಬಲವಾಗಿದ್ದಾರೆ. ಅವರು ಸ್ವತಃ ಅತ್ಯುತ್ತಮ ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಆಗಿರುವುದಲ್ಲದೆ. ತಮ್ಮ ಜೊತೆಯಲ್ಲೇ ತಂಡದ ಉಳಿದ ಆಟಗಾರರಲ್ಲೂ ಅತ್ಯುತ್ತಮವಾದದ್ದನ್ನು ಹೊರತರುವಲ್ಲಿ ನಿಸ್ಸೀಮರಾಗಿದ್ದಾರೆ. ಇದಕ್ಕೆ ಸಾಕ್ಷಿ ಕಳೆದೆರಡು ಆವೃತ್ತಿಗಳು. ಇನ್ನು ಯುಎಇನಲ್ಲಿ ಈ ಬಾರಿ ಐಪಿಎಲ್​ ಜರುಗುತ್ತಿರುವುದರಿಂದ ಇಮ್ರಾನ್​ ತಾಹೀರ್​,ಮಿಚೆಲ್​ ಸ್ಯಾಂಟ್ನರ್​, ರವೀಂದ್ರ ಜಡೇಜಾ ಸ್ಪಿನ್ ಹಾಗೂ ಪಿಯುಷ್​ ಚಾವ್ಲಾ ಅಂತಹ ​ ಬೌಲರ್​ಗಳ ಬಲವನ್ನು ಹೊಂದಿರುವುದರಿಂದ ನವೆಂಬರ್​ 10ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಕಾಣಬಹುದಾಗಿದೆ.

ಡ್ವೇನ್ ಬ್ರಾವೋ

ಇನ್ನು ಬ್ಯಾಟಿಂಗ್ ವಿಭಾಗಕ್ಕೆ ಬಂದರೆ ಅನುಭವಿಗಳಾದ ಫಾಫ್​ ಡು ಪ್ಲೆಸಿಸ್​, ಶೇನ್ ವಾಟ್ಸನ್​, ಅಂಬಾಟಿ ರಾಯುಡು, ಕೇದರ್​ ಜಾಧವ್​ ಹಾಗೂ ಸ್ವತಹ ಧೋನಿ ಇದ್ದರೆ ಬ್ರಾವೋ, ಜಡೇಜಾ ಹಾಗೂ ಸ್ಯಾಂಟ್ನರ್​ರ ಆಲ್​ರೌಂಡರ್​ ಬಲವನ್ನು ಹೊಂದಿದೆ. ಈ ಆಟಗಾರರ ಏಕಾಂಗಿಯಾಗಿ ಗೆಲುವನ್ನು ತಂದುಕೊಡುವಲ್ಲಿ ಸಮರ್ಥರಾಗಿದ್ದಾರೆ.

ಎಂಎಸ್​ ಧೋನಿ

ದೌರ್ಬಲ್ಯ

ಕಳೆದ 10 ಸೀಸನ್​ಗಳಲ್ಲಿ ಬಹುತೇಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ಸ್ಥಿರತೆಯುಳ್ಳ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಅನುಪಸ್ಥಿತಿ ಖಂಡಿತ ಕಾಡಲಿದೆ. ಇದು ಎದುರಾಳಿ ತಂಡಕ್ಕೆ ವರವಾಗಲಿದೆ. ಇನ್ನು ರೈನಾ ಕೇವಲ ಬ್ಯಾಟಿಂಗ್ ಅಲ್ಲದೆ ಅರೆಕಾಲಿಕ ಬೌಲರ್​ ಆಗಿಯೂ ತಂಡಕ್ಕೆ ನೆರವಾಗುತ್ತಿದ್ದರು. ಈ ವರ್ಷ ಅವರ ಆ ಸೇವೆಯನ್ನು ಸಿಎಸ್​ಕೆ ಕಳೆದುಕೊಳ್ಳಲಿದೆ. ಹಿರಿಯ ಬೌಲರ್​ ಹರ್ಭಜನ್​ ಸಿಂಗ್​ ಕೂಡ ಐಪಿಎಲ್​ನ ಭಾಗವಾಗಿದಿರುವುದು ಕೂಡ ತಂಡಕ್ಕೆ ಆಘಾತ ತಂದಿದೆ.

ಸುರೇಶ್​ ರೈನಾ

ಇದೆಲ್ಲವನ್ನು ಪಕ್ಕಕ್ಕಿರಿಸಿದರೂ ಸಿಎಸ್​ಕೆ ಬಹುದೊಡ್ಡ ಸಮಸ್ಯೆಯೆಂದರೆ ನಾಯಕ ಧೋನಿ, ಅಂಬಾಟಿ ರಾಯುಡು, ಶೇನ್ ವಾಟ್ಸನ್​ ಹಾಗೂ ಕೇದಾರ್​ ಜಾಧವ್​ ದೀರ್ಘ ಸಮಯದಿಂದ ಕ್ರಿಕೆಟ್​ನಿಂದ ದೂರ ಉಳಿದಿರುವುದರಿಂದ ಅವರ ಪ್ರದರ್ಶನದ ಮೇಲೆ ಖಂಡಿತ ಪರಿಣಾಮ ಬೀರಲಿದೆ.

ಇಮ್ರಾನ್​ ತಾಹೀರ್​

ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಎಂ.ಎಸ್.ಧೋನಿ (ನಾಯಕ / ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ, ಕೇದಾರ್ ಜಾಧವ್, ಕರಣ್ ಶರ್ಮಾ, ಇಮ್ರಾನ್ ತಾಹಿರ್, ದೀಪಕ್ ಚಹರ್, ಶಾರ್ದುಲ್ ಠಾಕೂರ್, ಲುಂಗಿ ಎನ್‌ಗಿಡಿ ಸ್ಯಾಮ್ ಕರ್ರನ್, ಮುರಳಿ ವಿಜಯ್, ಜೋಶ್ ಹ್ಯಾಜಲ್‌ವುಡ್, ರುತುರಾಜ್ ಗಾಯಕ್ವಾಡ್, ಎನ್​ ಜಗದೀಸನ್ ಎನ್ (ವಿಕೆಟ್ ಕೀಪರ್), ಕೆಎಂ ಆಸಿಫ್, ಮೋನು ಕುಮಾರ್, ಆರ್ ಸಾಯಿ ಕಿಶೋರ್

ಕೋಚಿಂಗ್ ಸಿಬ್ಬಂದಿ

ಸ್ಟೀಫನ್ ಫ್ಲೆಮಿಂಗ್ (ಮುಖ್ಯ ಕೋಚ್), ಮೈಕೆಲ್ ಹಸ್ಸಿ (ಬ್ಯಾಟಿಂಗ್ ಕೋಚ್), ಲಕ್ಷ್ಮಿಪತಿ ಬಾಲಾಜಿ (ಬೌಲಿಂಗ್ ಕೋಚ್), ಎರಿಕ್ ಸಿಮ್ಮನ್ಸ್ (ಬೌಲಿಂಗ್ ಸಲಹೆಗಾರ), ರಾಜೀವ್ ಕುಮಾರ್ (ಫೀಲ್ಡಿಂಗ್ ಕೋಚ್)

ABOUT THE AUTHOR

...view details