ಮುಂಬೈ: ಐಪಿಎಲ್ ಅಂದ್ರೆ ಹೊಡಿಬಡಿ ಆಟಕ್ಕೆ ಹೆಸರಾಗಿದ್ದು, ಇಲ್ಲಿ ಒಂದು,ಎರಡು ರನ್ಗಳಿಗಿಂತ ಬೌಂಡರಿ ಸಿಕ್ಸರ್ಗಳೇ ಹೆಚ್ಚು ಸಿಡಿಯುತ್ತವೆ. ಒಟ್ಟು 11 ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿರುವ ಸಿಕ್ಸರ್ ಸರದಾರರು ಯಾರು ಎಂಬ ಸಂಪೂರ್ಣ ಮಾಹಿತಿ ಈ ಸುದ್ದಿಯಲ್ಲಿದೆ.
ವಿಶ್ವ ಕ್ರಿಕೆಟ್ನ ಸ್ಫೋಟಕ ಆಟಗಾರರಾದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ , 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಎಬಿ ಡಿ ವಿಲಿಯರ್ಸ್, ಮಾಜಿ ಧೋನಿಯ ಹೆಲಿಕಾಪ್ಟರ್ ಶಾಟ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಿಕ್ಸರ್ಗಳ ಸಂಖ್ಯೆ ಇಲ್ಲಿದೆ.
ಕ್ರಿಸ್ ಗೇಲ್(292)
ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ತಂಡಗಳ ಪರ ಆಡಿರುವ ಕ್ರಿಸ್ಗೇಲ್ 112 ಪಂದ್ಯಗಳಲ್ಲಿ 292 ಸಿಕ್ಸರ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಎಬಿ ಡಿ ವಿಲಿಯರ್ಸ್(186)
ಮಿಸ್ಟರ್ 360 ಅಂತಲೇ ಪ್ರಸಿದ್ದರಾಗಿರುವ ದ. ಆಫ್ರಿಕಾದ ಎಬಿ ಡಿವಿಲಿಯರ್ಸ್, 141 ಪಂದ್ಯಗಳಿಂದ 186 ಸಿಕ್ಸರ್ಸ್ ಸಿಡಿಸಿ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ (186)
ಹೆಲಿಕಾಪ್ಟರ್ ಶಾಟ್ಗೆ ಫೇಮಸ್ ಆಗಿರುವ ಬಾರತ ತಂಡದ ಮಾಜಿ ನಾಯಕ ಧೋನಿ 175 ಪಂದ್ಯಗಳಿಂದ 186 ಸಿಕ್ಸರ್ ಸಿಡಿಸುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಪವರ್ ಹಿಟ್ಟರ್ ಸುರೇಶ್ ರೈನಾ(185)
ಐಪಿಎಲ್ ಕ್ರಿಕೆಟ್ನಲ್ಲಿ ಗರಿಷ್ಠ ರನ್(4985) ಸಾಧಕರಾಗಿರುವ ಸುರೇಶ್ ರೈನಾ, 176 ಪಂದ್ಯಗಳನ್ನಾಡಿದ್ದು 185 ಸಿಕ್ಸರ್ಸ್ ಸಿಡಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್(184)
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 173 ಪಂದ್ಯಗಳನ್ನು ಆಡಿರುವ ರೋಹಿತ್, 184 ಸಿಕ್ಸರ್ಸ್ ಸಿಡಿಸಿದ್ದಾರೆ.