ಕರ್ನಾಟಕ

karnataka

ETV Bharat / sports

ದಿನಗೂಲಿ ನೌಕರನ ಮಗನ ಯಾರ್ಕರ್​ ಬೌಲಿಂಗ್​ಗೆ ಮನಸೋತ ಸೆಹ್ವಾಗ್​: ಟ್ವೀಟ್ ಮೂಲಕ ಮೆಚ್ಚುಗೆ

ದುಬೈನ ಶೇಕ್ ಜಾಯೇದ್​ ಸ್ಟೇಡಿಯಂನಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡ 15 ರನ್​ಗಳ ಜಯ ಸಾಧಿಸಿತ್ತು. ರಶೀದ್​ ಖಾನ್​, ಭುವನೇಶ್ವರ್ ಕುಮಾರ್​ ಹಾಗೂ ನಟರಾಜನ್​ ಅವರು ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಟೂರ್ನಿಯಲ್ಲಿ ಎಸ್​ಆರ್​ಹೆಚ್​ ಮೊದಲ ಗೆಲುವು ಪಡೆದಿತ್ತು.

ಟಿ ನಟರಾಜನ್​
ಟಿ ನಟರಾಜನ್​

By

Published : Sep 30, 2020, 10:28 PM IST

ಹೈದರಾಬಾದ್​: ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್​ಗಳಲ್ಲಿ ಅದ್ಭುತ ಯಾರ್ಕರ್​ ಎಸೆತಗಳನ್ನೆಸದು ಹೈದರಾಬಾದ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಸ್​ಆರ್​ಹೆಚ್​ ತಂಡದ ಟಿ ನಟರಾಜನ್​ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಬೈನ ಶೇಕ್ ಜಾಯೇದ್​ ಸ್ಟೇಡಿಯಂನಲ್ಲಿ ಮಂಗಳವಾರ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡ 15 ರನ್​ಗಳ ಜಯ ಸಾಧಿಸಿತ್ತು. ರಶೀದ್​ ಖಾನ್​, ಭುವನೇಶ್ವರ್ ಕುಮಾರ್​ ಹಾಗೂ ನಟರಾಜನ್​ ಅವರು ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಟೂರ್ನಿಯಲ್ಲಿ ಎಸ್​ಆರ್​ಹೆಚ್​ ಮೊದಲ ಗೆಲುವು ಪಡೆದಿತ್ತು.

ಟಿ ನಟರಾಜನ್​

14ನೇ ಓವರ್​ ಬೌಲಿಂಗ್ ಮಾಡಿದ್ದ ನಟರಾಜನ್​ 5 ಯಾರ್ಕರ್​ ಪ್ರಯೋಗಿಸುವ ಮೂಲಕ ಎದುರಾಳಿ ತಂಡ ದೊಡ್ಡ ಹೊಡೆತ ಬಾರಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ 18 ನೇ ಓವರ್​ನಲ್ಲೂ ಉತ್ತಮವಾಗಿ ಬೌಲಿಂಗ್​ ಮಾಡಿ ಸ್ಟೋಯ್ನಿಸ್​ ವಿಕೆಟ್ ಪಡೆದಿದರು. ನಟರಾಜನ್ ಬೌಲಿಂಗ್ ಕೌಶಲ್ಯಕ್ಕೆ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

" ನಟರಾಜನ್​ ಅವರ ಬೌಲಿಂಗ್ ನೋಡಿ ತುಂಬಾ ಸಂತೋಷವಾಗಿದೆ. ಡೆತ್​ ಓವರ್​ಗಳಲ್ಲಿ ಅತ್ಯುತ್ತಮ ಯಾರ್ಕರ್​ಗಳನ್ನು ಪ್ರಯೋಗಿಸಿದ್ದಾರೆ. ರಶೀದ್​ ಕೂಡ ಅದ್ಭುತ ಪ್ರದರ್ಶನ ತೋರಿದರು. ಈಗ ಎಲ್ಲ ತಂಡಗಳು ಗೆಲುವಿನ ಹಾದಿಯನ್ನು ಹಿಡಿದಿರುವುದು ಅದ್ಭುತವಾಗಿದೆ. ವಿನೋದ ಹೀಗೆ ಮುಂದುವರಿಯಲಿದೆ. ಓಂ ತೆವಾಟಿಯಾ ನಮಾಹ್​" ಎಂದು ಸೆಹ್ವಾಗ್ ಟ್ವೀಟ್​ ಮಾಡಿದ್ದಾರೆ.

​ತಮಿಳುನಾಡಿನ ಸಣ್ಣ ಹಳ್ಳಿಯಿಂದ ಬಂದಿರುವ ನಟರಾಜನ್​ ದಿನಗೂಲಿ ನೌಕರನ ಮಗನಾಗಿದ್ದಾರೆ. ಕಠಿಣ ಪರಿಶ್ರಮಿಯಾಗಿರುವ ನಟರಾಜನ್​ ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ನಂತರ ತಮಿಳುನಾಡು ತಂಡದಲ್ಲಿ ಅವಕಾಶ ಪಡೆದಿದ್ದರು. ನಂತರ 2017ರ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 3 ಕೋಟಿನ ರೂ.ಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ಖರೀದಿಸಿತ್ತು. ಆದರೆ, ಉತ್ತಮ ಪ್ರದರ್ಶನ ತೋರಲು ವಿಫಲರಾದರು. ನಂತರ 2018ರ ಹರಾಜಿನಲ್ಲಿ 40 ಲಕ್ಷಕ್ಕೆ ಸನ್​ರೈಸರ್ಸ್ ಹೈದರಾಬಾದ್​ ತಂಡ ಖರೀದಿಸಿತು. ಇದೀಗ ಮತ್ತಯ್ಯ ಮುರಳೀದರನ್​ ಗರಡಿಯಲ್ಲಿ ಪಳಗುತ್ತಿರುವ ನಟರಾಜನ್ ದಿನದಿಂದ ದಿನಕ್ಕೆ ಚರ್ಚೆಗೆ ಬರುತ್ತಿದ್ದಾರೆ.

ABOUT THE AUTHOR

...view details