ಅಬುಧಾಬಿ :ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಆರ್ಸಿಬಿ ತಂಡದ ಪ್ರಧಾನ ಸ್ಪಿನ್ನರ್ ಯಜುವೇಂದ್ರ ಚಹಾಲ್ ಪಂಜಾಬ್ ತಂಡದ ಶಮಿ ಬಳಿಯಿದ್ದ ಪರ್ಪಲ್ ಕ್ಯಾಪ್‌ನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟೂರ್ನಿಯಲ್ಲಿ ಬೆಸ್ಟ್ ಸ್ಪಿನ್ನರ್ ಎಂದು ಹೆಸರಾಗಿರುವ ಚಹಾಲ್ ರಾಯಲ್ಸ್ ತಂಡದ ಸಂಜು ಸಾಮ್ಸನ್(4), ರಾಬಿನ್ ಉತ್ತಪ್ಪ(17) ಹಾಗೂ ಲಾಮ್ರರ್(47)ರನ್ನು ಪೆವಿಲಿಯನ್ಗಟ್ಟಿದರು.
ಟೂರ್ನಿಯಲ್ಲಿ 4ನೇ ಪಂದ್ಯವನ್ನಾಡುತ್ತಿರುವ ಚಹಾಲ್ 16 ಓವರ್ಗಳಲ್ಲಿ 115 ರನ್ ಬಿಟ್ಟು ಕೊಟ್ಟಿದ್ದು 8 ವಿಕೆಟ್ ಪಡೆದಿದ್ದಾರೆ. ಶಮಿ 15 ಓವರ್ಗಳಲ್ಲಿ 118 ರನ್ ಬಿಟ್ಟುಕೊಟ್ಟಿದ್ದು ಅವರೂ ಕೂಡ 8 ವಿಕೆಟ್ ಪಡೆದಿದ್ದಾರೆ. ಆದರೆ, ಸರಾಸರಿ ಆಧಾರದಲ್ಲಿ ಮುಂದಿರುವ ಚಹಾಲ್ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ನಾಲ್ಕು ಪಂದ್ಯಗಳಿಂದ 246 ರನ್ಗಳಿಕೆ ಮಾಡಿ ಹೆಚ್ಚು ರನ್ಗಳಿಕೆ ಮಾಡಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಯಾಂಕ್ ಅಗರ್ವಾಲ್ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ರನ್ ವಿಭಾಗದಲ್ಲಿ ಮತ್ತೋರ್ವ ಕನ್ನಡಿಗ ಕೆ ಎಲ್ ರಾಹುಲ್ 239ರನ್ಗಳಿಸಿ ಎರಡನೇ ಸ್ಥಾನ ಹಾಗೂ ಸಿಎಸ್ಕೆ ತಂಡದ ಡುಪ್ಲೆಸಿ 173 ರನ್ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.