ದುಬೈ:13ನೇ ಐಪಿಎಲ್ ಆವೃತ್ತಿಗಾಗಿ ಯುಎಇಗೆ ತೆರಳಿದ್ದ ರಾಜಸ್ಥಾನ ತಂಡ ಕ್ವಾರಂಟೈನ್ ಮುಗಿಸಿದ ಬೆನ್ನಲ್ಲೇ ಅಭ್ಯಾಸವನ್ನೂ ಆರಂಭಿಸಿದೆ.
ಆಗಸ್ಟ್ 20ರಂದು ಯುಎಇಗೆ ತೆರಳಿದ್ದ ರಾಜಸ್ಥಾನ್ ತಂಡ ಬುಧವಾರ ಅಭ್ಯಾಸ ನಡೆಸಿದೆ. ಬಿಸಿಸಿಐ ಪ್ರೋಟೋಕಾಲ್ಗಳ ಪ್ರಕಾರ 6 ದಿನಗಳ ಕ್ವಾರಂಟೈನ್ ಹಾಗೂ 3 ಕೋವಿಡ್ ಟೆಸ್ಟ್ಗಳ ನಂತರ ಕ್ರೀಡಾಂಗಣದಲ್ಲಿ ತರಬೇತಿಯನ್ನು ಆರಂಭಿಸಿರುವುದಾಗಿ ಟ್ವಿಟರ್ ಪೋಸ್ಟ್ ಮಾಡಿ ದೃಢಪಡಿಸಿದೆ.
ಇದೇ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ಸೇರಿಕೊಂಡಿರುವ ರಾಬಿನ್ ಉತ್ತಪ್ಪ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಹಾಗೂ ರಾತ್ರಿ 10 ಗಂಟೆಯ ಸಮಯದಲ್ಲಿ ಎಲ್ಲ ಆಟಗಾರರು ವ್ಯಾಯಾಮ ಮಾಡುತ್ತಿರುವ ಕೆಲವು ಫೋಟೋಗಳನ್ನು ಆರ್ ಆರ್ ಟ್ವಿಟರ್ನಲ್ಲಿ ಶೇರ್ ಮಾಡಿದೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ 53 ದಿನಗಳ ಕಾಲ ಅಬುಧಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಆಯೋಜನೆಗೊಳ್ಳಲಿದೆ. ಆಶ್ಚರ್ಯಕರ ವಿಚಾರವೆಂದರೆ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ವೀಕೆಂಡ್ ಬದಲಾಗಿ ಮಂಗಳವಾರ ಫೈನಲ್ ಪಂದ್ಯ ನಡೆಯಲಿದೆ. ಆದರೆ ಪಂದ್ಯಗಳು 4 ಗಂಟೆಗೆ ಬದಲಾಗಿ 3:30ಕ್ಕೆ , 8 ಗಂಟೆಗೆ ಬದಲಾಗಿ 7:30 ಕ್ಕೆ ಆರಂಭಗೊಳ್ಳಲಿದೆ.