ಕರ್ನಾಟಕ

karnataka

ETV Bharat / sports

ಬಯೋ ಬಬಲ್​ನಲ್ಲಿರುವ ಆಟಗಾರನನ್ನ ಸಂಪರ್ಕಿಸಿ ಬುಕ್ಕಿಗಳಿಂದ ಫಿಕ್ಸಿಂಗ್​ಗೆ ಯತ್ನ: ತನಿಖೆ ಆರಂಭಿಸಿದ ಬಿಸಿಸಿಐ - ಎಸಿಯು ಮುಖ್ಯಸ್ಥ ಅಜಿತ್‌ ಸಿಂಗ್

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೋವಿಡ್​ 19 ಪರಿಣಾಮ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆಶ್ರಯದಲ್ಲಿ ಬಯೋ ಬಬಲ್​ನಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಬುಕ್ಕಿಗಳು ನೇರವಾಗಿ ಯಾವುದೇ ಆಟಗಾರನನ್ನು ಸಂಪರ್ಕಿಸುವ ಅವಕಾಶವನ್ನು ಕಡಿಮೆ ಮಾಡಿದೆ. ಆದರೂ ಬುಕ್ಕಿಗಳ ಆನ್‌ಲೈನ್‌ ಜಾಲ ಬೃಹತ್​ ಪ್ರಮಾಣದಲ್ಲಿರುವುದರಿಂದ ಆತಂಕ ಕೂಡ ಎದುರಾಗಿದೆ.

ಐಪಿಎಲ್  ಆಟಗಾರನಿಗೆ ಬುಕ್ಕಿಗಳಿಂದ ಸಂಪರ್ಕ
ಐಪಿಎಲ್ ಆಟಗಾರನಿಗೆ ಬುಕ್ಕಿಗಳಿಂದ ಸಂಪರ್ಕ

By

Published : Oct 3, 2020, 9:51 PM IST

Updated : Oct 3, 2020, 10:32 PM IST

ನವದೆಹಲಿ: ಬುಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿ ಫಿಕ್ಸಿಂಗ್​ಗೆ ಪ್ರೇರೇಪಿಸಲು ಪ್ರಯತ್ನಿಸಿದ್ದಾರೆ ಎಂದು ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗನೊಬ್ಬ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ವರದಿ ಮಾಡಿಕೊಂಡಿದ್ದಾರೆ. ಎಚ್ಚೆತ್ತುಕೊಂಡಿರುವ ಎಸಿಯು ತನಿಖೆ ಆರಂಭಿಸಿದೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೋವಿಡ್​ 19 ಪರಿಣಾಮ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಆಶ್ರಯದಲ್ಲಿ ಬಯೋ ಬಬಲ್​ನಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಬುಕ್ಕಿಗಳು ನೇರವಾಗಿ ಯಾವುದೇ ಆಟಗಾರನನ್ನು ಸಂಪರ್ಕಿಸುವ ಅವಕಾಶ ಕಡಿಮೆ ಮಾಡಿದೆ. ಆದರೂ ಬುಕ್ಕಿಗಳ ಆನ್‌ಲೈನ್‌ ಜಾಲ ಬೃಹತ್​ ಪ್ರಮಾಣದಲ್ಲಿರುವುದರಿಂದ ಆತಂಕ ಕೂಡ ಎದುರಾಗಿದೆ.

ಎರಡು ದಿನಗಳ ಹಿಂದೆ ಬುಕ್ಕಿಗಳು ದುಬೈಗೆ ಬಂದಿರುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದ ಎಸಿಯು ಮುಖ್ಯಸ್ಥ ಅಜಿತ್‌ ಸಿಂಗ್‌, ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

ಬಿಸಿಸಿಐ

"ಹೌದು, ಒಬ್ಬ ಆಟಗಾರನೊಬ್ಬ ಈ ಕುರಿತು ವರದಿ ಮಾಡಿಕೊಂಡಿರುವುದು ನಿಜ ಎಂದು ರಾಜಸ್ಥಾನದ ಮಾಜಿ ಡಿಜಿಪಿಯಾಗಿರುವ ಅಜಿತ್ ಸಿಂಗ್ ಹೇಳಿದ್ದು, ಬುಕ್ಕಿಯ ಪತ್ತೆಗೆ ಬಲೆ ಬೀಸಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದು ಅಜಿತ್‌ ಸಿಂಗ್‌ ಹೇಳಿದ್ದಾರೆ.

ಭ್ರಷ್ಟಾಚಾರ ತಡೆ ನಿಯಮಾವಳಿಗಳ ಪ್ರಕಾರ, ಬುಕ್ಕಿಯ ಸಂಪರ್ಕಕ್ಕೆ ಒಳಗಾದ ಆಟಗಾರ(ಭಾರತೀಯ ಅಥವಾ ವಿದೇಶಿಗ) ಮತ್ತು ಫ್ರ್ಯಾಂಚೈಸಿಯ ಹೆಸರನ್ನು ಎಸಿಯು ಅಧಿಕಾರಿಗಳು ಬಹಿರಂಗಪಡಿಸಿಲ್ಲ

ಐಪಿಎಲ್ 2020

ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಬಯೋ ಸೆಕ್ಯೂರ್​ ವಲಯದಲ್ಲಿರುವುದರಿಂದ ಈ ವರ್ಷ ಇತರ ವರ್ಷಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಆನ್‌ಲೈನ್‌ ಮೂಲಕ ನಡೆಯುವ ಫಿಕ್ಸಿಂಗ್‌ ಮೇಲೆ ಎಸಿಯು ಹೆಚ್ಚು ನಿಗಾ ವಹಿಸಿದೆ. ಬುಕ್ಕಿ ಸಂಪರ್ಕ ಮಾಡಿದ ತಕ್ಷಣವೇ ಆಟಗಾರ ಎಸಿಯು ಗಮನಕ್ಕೆ ತಂದಿರುವುದು ಉತ್ತಮ ವಿಚಾರ ಎಂದು ಅವರು ಹೇಳಿದ್ದಾರೆ.

Last Updated : Oct 3, 2020, 10:32 PM IST

ABOUT THE AUTHOR

...view details