ನವದೆಹಲಿ:2020ರ ಟಿ-20 ವಿಶ್ವಕಪ್ವರೆಗೂ ಎಂಎಸ್ ಧೋನಿ ನಿವೃತ್ತಿ ಪಡೆದುಕೊಳ್ಳದಂತೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಪಂತ್ ಕೀಪರ್ ಆಗಿ ಪಳಗುವವರೆಗೂ ಧೋನಿ ಮೆಂಟರ್ ಅಥವಾ ಬ್ಯಾಕ್ ಅಪ್ ಆಗಿ ತಂಡದಲ್ಲಿ: ಮ್ಯಾನೇಜ್ಮೆಂಟ್
ಎಂಎಸ್ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಮಾತನಾಡಿದ್ದು, 2020ರ ಟಿ-20 ವಿಶ್ವಕಪ್ವರೆಗೂ ಅವರು ತಂಡದಲ್ಲಿ ಇರುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡ ಬಳಿಕ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಅವರು ನಿವೃತ್ತಿ ಘೋಷಣೆ ಮಾಡುವುದು ಒಳ್ಳೆಯದು ಎಂದು ಅನೇಕ ಮಾಜಿ ಕ್ರಿಕೆಟರ್ಸ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.
ಓರ್ವ ಉತ್ತಮ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಪಳಗಬೇಕಾಗಿದ್ದು, ಹೀಗಾಗಿ 2020ರ ಟಿ-20 ವಿಶ್ವಕಪ್ವರೆಗೂ ಅವರು ತಂಡದಲ್ಲಿದ್ದುಕೊಂಡು ಮೆಂಟರ್ ಅಥವಾ ಬ್ಯಾಕ್ ಆಪ್ ಆಗಿ ಸೇವೆ ಸಲ್ಲಿಕೆ ಮಾಡಲಿ ಎಂಬುದು ತಿಳಿದು ಬಂದಿದೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಧೋನಿಗೆ ವಿಶ್ರಾಂತಿ ನೀಡಿ, ರಿಷಭ್ಗೆ ಚಾನ್ಸ್ ನೀಡಲಾಗಿದೆ.