ಪುಣೆ :ಮೊದಲೆರಡು ಪಂದ್ಯಗಳಲ್ಲಿ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿರುವ ಕನ್ನಡಿಗ ಪ್ರಸಿಧ್ ಕೃಷ್ಣ ಅವರ ಪೇಸ್ ಮತ್ತು ಸೀಮ್ ಬೌಲಿಂಗ್ ಹೊಂದಿರುವುದರಿಂದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಅರ್ಹರಾಗಿದ್ದಾರೆ ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
25 ವರ್ಷದ ಕರ್ನಾಟಕದ ಬೌಲರ್ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ್ದರು. ಅವರು ಮೊದಲ ಪಂದ್ಯದಲ್ಲಿ ದಾಖಲೆಯ 4 ವಿಕೆಟ್ ಮತ್ತು 2ನೇ ಪಂದದ್ಯದಲ್ಲಿ 2 ವಿಕೆಟ್ ಪಡೆದಿದ್ದರು.
ಅವರ ಬೌಲಿಂಗ್ ಕೌಶಲ್ಯ ಟೆಸ್ಟ್ಗೆ ಸೂಕ್ತವಾಗಿದೆ. ಹಾಗಾಗಿ, 2018ರಲ್ಲಿ ಜಸ್ಪ್ರೀತ್ ಬುಮ್ರಾರನ್ನು ದೀರ್ಘ ಮಾದರಿ ಕ್ರಿಕೆಟ್ನಲ್ಲಿ ಪ್ರಯೋಗಿಸಿದ ರೀತಿ ಇವರನ್ನ ಪರಿಗಣಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ನಮ್ಮ ತಂಡ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು : ಪ್ರಸಿದ್ಧ್ ಕೃಷ್ಣ