ವಿಶಾಖಪಟ್ಟಣಂ:ಆತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ದಕ್ಷಿಣ ಆಫ್ರಿಕಾ ಪ್ರತ್ಯುತ್ತರ ನೀಡಿದ್ದು, ಎಲ್ಗರ್,ಡಿಕಾಕ್ ಶತಕ ಸಿಡಿಸಿ ಮಿಂಚಿದ್ದಾರೆ. ಸದ್ಯ 8ವಿಕೆಟ್ನಷ್ಟಕ್ಕೆ ದಕ್ಷಿಣ ಆಫ್ರಿಕಾ 385ರನ್ಗಳಿಕೆ ಮಾಡಿದೆ.
ಭಾರತದ 502ರನ್ಗೆ ಪ್ರತ್ಯುತ್ತರವಾಗಿ ನಿನ್ನೆ ಬ್ಯಾಟಿಂಗ್ ಆರಂಭಿಸಿ 39ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ತಂಡ, ಇಂದು ಬ್ಯಾಟಿಂಗ್ ಆರಂಭಿಸಿತ್ತು. ತಂಡಕ್ಕೆ ಡೀನ್ ಎಲ್ಗರ್ ಹಾಗೂ ಕ್ಯಾಪ್ಟನ್ ಡು ಪ್ಲೆಸಿಸ್ 115ರನ್ಗಳ ಉತ್ತಮ ಜೊತೆಯಾಟ ನೀಡಿದರು. 55ರನ್ಗಳಿಸಿದ್ದ ವೇಳೆ ಪ್ಲೆಸಿಸ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ಕ್ವಿಂಟನ್ ಡಿಕಾಕ್ ಜೊತೆ ಎಲ್ಗರ್ ತಮ್ಮ ಬ್ಯಾಟಿಂಗ್ ಮುಂದುವರಿಸಿದರು.