ಕರ್ನಾಟಕ

karnataka

ETV Bharat / sports

ಸೆಮಿಫೈನಲ್​ಗೆ ವರುಣನ ಅಡ್ಡಿ: ಭಾರತ-ನ್ಯೂಜಿಲ್ಯಾಂಡ್​ ಪಂದ್ಯ ನಾಳೆಗೆ ಮುಂದೂಡಿಕೆ - ಭಾರತ-ನ್ಯೂಜಿಲ್ಯಾಂಡ್​

ಭಾರತ-ನ್ಯೂಜಿಲ್ಯಾಂಡ್​ ನಡುವಿನ ಸೆಮಿಫೈನಲ್​ ಪಂದ್ಯಕ್ಕೆ ವರುಣ ಅಡ್ಡಿಯಾಗಿರುವ ಕಾರಣ ಪಂದ್ಯವನ್ನ ನಾಳೆ ನಡೆಸಲು ತೀರ್ಮಾನಿಸಲಾಗಿದೆ.

ಮಳೆಗೆ ಪಂದ್ಯ ರದ್ಧು

By

Published : Jul 9, 2019, 11:11 PM IST

ಮ್ಯಾಂಚೆಸ್ಟರ್​​: ವಿಶ್ವಕಪ್​​ನ ಮೊದಲ ಸೆಮಿಫೈನಲ್​ ಪಂದ್ಯಕ್ಕೆ ವರುಣ ಅಡ್ಡಿಯಾಗಿರುವ ಕಾರಣ ಉಳಿದ ಪಂದ್ಯವನ್ನ ಮೀಸಲು ದಿನವಾದ ನಾಳೆ ನಡೆಸಲು ತೀರ್ಮಾನಿಸಲಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ್ದ ಕಿವೀಸ್​ ತಂಡ 46.1 ಓವರ್​ಗಳಲ್ಲಿ 5ವಿಕೆಟ್ ​ನಷ್ಟಕ್ಕೆ 211ರನ್​ ಗಳಿಕೆ ಮಾಡಿದ್ದ ವೇಳೆ ಮಳೆ ಸುರಿಯಲು ಆರಂಭವಾಯಿತು. ಸತತವಾಗಿ ಸುರಿದ ಮಳೆ ನಿಲ್ಲುವ ಯಾವುದೇ ಲಕ್ಷ್ಣಣಗಳು ಕಂಡು ಬರಲಿಲ್ಲ. ಇದರಿಂದಾಗಿ ಪಂದ್ಯ ಆರಂಭಕ್ಕೆ ಮತ್ತಷ್ಟು ವಿಳಂಬವಾಯಿತು.

ಹೀಗಾಗಿ ಅಂಪೈರ್​ಗಳು ಪಂದ್ಯವನ್ನ ನಾಳೆಗೆ ಮುಂದೂಡಿಕೆ ಮಾಡಿದ್ದು, ನ್ಯೂಜಿಲ್ಯಾಂಡ್ ತನ್ನ 3.5 ಓವರ್​ಗಳನ್ನ ನಾಳೆ ಆಡಲಿದೆ.

ABOUT THE AUTHOR

...view details