ಕರ್ನಾಟಕ

karnataka

ETV Bharat / sports

ಸಚಿನ್ ದಾಖಲೆ ಬ್ರೇಕ್​ ಮಾಡಲು ಕಿಂಗ್ ಕೊಹ್ಲಿಗೆ ಬೇಕು 23 ರನ್

ಇಂದು ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23 ರನ್ ಬಾರಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 12 ಸಾವಿರ ರನ್ ಪೂರೈಸಿದ 2ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

Virat Kohli
ವಿರಾಟ್ ಕೊಹ್ಲಿ

By

Published : Dec 2, 2020, 4:16 AM IST

ಕ್ಯಾನ್ಬೆರಾ:ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವು ದಾಖಲೆ ಬರದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣ ಮಾಡುವ ಸನಿಹದಲ್ಲಿದ್ದಾರೆ.

ಇಂದು ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 23 ರನ್ ಬಾರಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 12 ಸಾವಿರ ರನ್ ಪೂರೈಸಿದ 2ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ..ಆಸ್ಟ್ರೇಲಿಯಾದಲ್ಲಿ 20 ವರ್ಷಗಳ ನಂತರ ವೈಟ್​ವಾಶ್ ತಪ್ಪಿಸಿಕೊಳ್ಳುವುದೇ ಭಾರತ?

ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತದ ಪರ 12 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಕೊಹ್ಲಿ 11,977 ರನ್ ಗಳಿಸಿದ್ದು, ಆಸೀಸ್ ವಿರುದ್ಧ 23 ರನ್ ಸಿಡಿಸಿದ್ರೆ 12 ಸಾವಿರ ಆಟಗಾರರ ಕ್ಲಬ್​ಗೆ ಸೇರ್ಪಡೆಯಾಗಲಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ 6ನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.

ಸಚಿನ್ ತೆಂಡೂಲ್ಕರ್ 12 ಸಾವಿರ ರನ್​ ಪೂರೈಸಲು 300 ಇನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ 241 ಇನಿಂಗ್ಸ್​ಗಳಲ್ಲಿ 11,977 ಬಾರಿಸಿದ್ದು, ವೇಗವಾಗಿ12,000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್​​ಮನ್ ಎಂಬ ದಾಖಲೆ ಕೂಡ ಕೊಹ್ಲಿ ಪಾಲಾಗಲಿದೆ.

ABOUT THE AUTHOR

...view details