ಸಿಡ್ನಿ:ಆರಂಭಿಕ ಆಘಾತದ ನಡುವೆಯೂ ಕಾಂಗರೂ ತಂಡಕ್ಕೆ ಲಾಬುಶೇನ್ ಮತ್ತು ಸ್ಮಿತ್ ಆಸರೆಯಾಗಿದ್ದು, ದ್ವಿತೀಯ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸುವ ಮೂಲಕ 197 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಆಲ್ಔಟ್ ಆದ ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿದ ಆಸ್ಟ್ರೇಲಿಯಾಕ್ಕೆ ಸಿರಾಜ್ ಶಾಕ್ ನೀಡಿದ್ರು. ಕಳೆದ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ್ದ ಪುಕೋವ್ಸ್ಕಿ (10) ಸಹಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ವಾರ್ನರ್ ಕೂಡ ಹೆಚ್ಚು ಕಾಲ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಅಶ್ವಿನ್ ಎಸೆತದಲ್ಲಿ ಸ್ವೀಪ್ ಮಾಡಲು ಹೋಗಿ, ಎಲ್ಬಿ ಬಲೆಗೆ ಬಿದ್ರು. ಆರಂಭಿಕ ಆಟಗಾರರು ಪೆವಿಲಿಯನ್ ಸೇರುತ್ತಿದ್ದಂತೆ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್ ಮೂರನೇ ದಿನದ ಅಂತ್ಯದ ವರೆಗೂ ಬ್ಯಾಟ್ ಬೀಸಿದ್ರು.
ಮೂರನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದ್ದು, ಒಟ್ಟು 197 ರನ್ಗಳ ಮುನ್ನಡೆ ಸಾಧಿಸದೆ. ಸ್ಟೀವ್ ಸ್ಮಿತ್ 29 ಮತ್ತು ಮಾರ್ನಸ್ ಲಾಬುಶೇನ್ 47 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಸಿರಾಜ್ ಮತ್ತು ಆಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.