ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾಕ್ಕೆ ಪಂತ್, ಪೂಜಾರ ಆಸರೆ: ಭೋಜನ ವಿರಾಮದ ವೇಳೆಗೆ ಸುಸ್ಥಿತಿಯಲ್ಲಿ ಭಾರತ - ರಿಷಭ್ ಪಂತ್

ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 180 ರನ್​ ಗಳಿಸಿದ್ದು, 158 ರನ್​ಗಳ ಹಿನ್ನಡೆ ಅನುಭವಿಸಿದೆ. ರಿಷಭ್ ಪಂತ್ 29 ಮತ್ತು ಪೂಜಾರ 42 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

India vs Australia 3rd Test
ಭೋಜನ ವಿರಾಮದ ವೇಳೆಗೆ ಸುಸ್ಥಿತಿಯಲ್ಲಿ ಭಾರತ

By

Published : Jan 9, 2021, 7:25 AM IST

ಸಿಡ್ನಿ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾಕ್ಕೆ ಪಂತ್ ಮತ್ತು ಪೂಜಾರ ಆಸರೆಯಾಗಿದ್ದು, ಭೋಜನ ವಿರಾಮದ ವೇಳೆಗೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ.

ಭಾರತ ಎರಡನೇ ದಿನದಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ಪೂಜಾರ​ ಮತ್ತು ರಹಾನೆ ತಾಳ್ಮೆಯಿಂದ ಬ್ಯಾಟ್ ಬೀಸುತ್ತ, ನಿಧಾನವಾಗಿ ರನ್ ಕದಿಯುತ್ತಿದ್ದರು. ಆದರೆ ಕಳೆದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಅಜಿಂಕ್ಯಾ ರಹಾನೆ 22 ರನ್ ಗಳಿಸಿ ಕಮ್ಮಿನ್ಸ್​ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಹನುಮ ವಿಹಾರಿ ತಮ್ಮ ನೀರಸ ಪ್ರದರ್ಶನ ಮುಂದುವರೆಸಿದ್ದು, ರನ್ ಕದಿಯುವ ಯತ್ನದಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು. 5ನೇ ವಿಕೆಟ್​ಗೆ ಜೊತೆಯಾದ ಪೂಜಾರ ಮತ್ತು ಪಂತ್, ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದಾರೆ. ಆಸೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಜೋಡಿ ಉತ್ತಮವಾಗಿ ರನ್ ಕಲೆಹಾಕುತ್ತಿದೆ.

ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 180 ರನ್​ ಗಳಿಸಿದ್ದು, 158 ರನ್​ಗಳ ಹಿನ್ನಡೆ ಅನುಭವಿಸಿದೆ. ರಿಷಭ್ ಪಂತ್ 29 ಮತ್ತು ಪೂಜಾರ 42 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ABOUT THE AUTHOR

...view details