ಕರ್ನಾಟಕ

karnataka

ETV Bharat / sports

ಭಾರತ ತಂಡಕ್ಕೆ ಈಗಲೂ ತಿರುಗಿ ಬೀಳುವ ಅವಕಾಶ ಖಂಡಿತಾ ಇದೆ: ಆಸೀಸ್​ ಮಾಜಿ ಕೋಚ್​ - ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ

ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 36 ರನ್ ಗಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲೇ ಅತ್ಯಂತ ಕಡಿಮೆ ಮೊತ್ತ ಗಳಿಸಿತ್ತು. ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಡ್ಯಾರೆನ್ ಲೆಹ್ಮನ್
ಡ್ಯಾರೆನ್ ಲೆಹ್ಮನ್

By

Published : Dec 23, 2020, 10:56 PM IST

ಮೆಲ್ಬೋರ್ನ್:ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದ ಸೋಲಿನ ಹೊರತಾಗಿಯೂ ಮುಂದಿನ ಪಂದ್ಯಗಳಲ್ಲಿ ಭಾರತ ತಂಡ ತಿರುಗಿ ಬೀಳಲಿದೆ. ಟೀಮ್​ ಇಂಡಿಯಾದಲ್ಲಿ ಕೆಲವು ಗುಣಮಟ್ಟದ ಆಟಗಾರರನ್ನು ಹೊಂದಿರುವುದರಿಂದ ಮತ್ತೆ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಅವಕಾಶ ಇದೆ ಎಂದು ಎಂದು ಆಸ್ಟ್ರೇಲಿಯಾದ ಮಾಜಿ ಕೋಚ್​ ಡ್ಯಾರೆನ್ ಲೆಹ್ಮನ್ ಅಭಿಪ್ರಾಯಪಟ್ಟಿದ್ದಾರೆ.

ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 36 ರನ್ ಗಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲೇ ಅತ್ಯಂತ ಕಡಿಮೆ ಮೊತ್ತ ಗಳಿಸಿತ್ತು. ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

" ಪ್ರಸ್ತುತ ಭಾರತ ತಂಡ ತಿರುಗಿ ಬೀಳುವುದಕ್ಕೆ ಕಷ್ಟಕರವಾಗಬಹುದು. ಆದರೆ, ಭಾರತ ಕೆಲವು ಗುಣಮಟ್ಟದ ಆಟಗಾರರನ್ನು ಪಡೆದಿರುವುದರಿಂದ, ಅದು ಅವರಿಂದ ಸಾಧ್ಯವಾಗಬಹುದು " ಎಂದು ಲೆಹ್ಮನ್ 'ಎಸ್ಎ ಸ್ಪೋರ್ಟ್ಸ್ ಡೇ'ಗೆ ತಿಳಿಸಿದ್ದಾರೆ.

ಭಾರತವು ಪ್ರಬಲ ಬೌಲಿಂಗ್ ದಾಳಿಯನ್ನು ಹೊಂದಿದೆ ಮತ್ತು ಅವರ ಬ್ಯಾಟ್ಸ್‌ಮನ್‌ಗಳು ಬೌನ್ಸ್ ಅನ್ನು ಚೆನ್ನಾಗಿ ನಿಭಾಯಿಸಿದರೆ, ಖಂಡಿತ ಪ್ರವಾಸಿಗರು ಸರಣಿಯಲ್ಲಿ ಪುನರಾಗಮನ ಮಾಡಬಹುದು ಎಂದು 50 ವರ್ಷದ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಅಭಿಪ್ರಾಯಪಟ್ಟಿದ್ದಾರೆ.

" ಭಾರತೀಯರಿಗೆ ಖಂಡಿತವಾಗಿಯೂ ಬೌಲಿಂಗ್​ನಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಆದರೆ ಬ್ಯಾಟ್ಸ್‌ಮನ್‌ಗಳು ಬೌನ್ಸ್ ಅನ್ನು ನಿಭಾಯಿಸಬಹುದಾದರೆ ತಂಡ ಖಂಡಿತ ಮೇಲುಗೈ ಸಾಧಿಸಬಹುದು. ಏಕೆಂದರೆ ಎಂಸಿಜಿ ಪಿಚ್ ಫ್ಲಾಟ್ ಇರುವುದರಿಂದ ಅವರಿಗೆ ಸ್ವಲ್ಪ ಅನುಕೂಲವಾಗಿರುತ್ತದೆ. ಆದ್ದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳು ಪುಟಿದೇಳುವ ಮತ್ತು ಕೆಲವು ರನ್ ಗಳಿಸುವುದನ್ನು ನಾವು ನೋಡಬಹುದು, ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಅವರಿಗೆ ಪ್ರಮುಖವಾದುದು ಎಂದು ಲೆಹ್ಮನ್ ಹೇಳಿದ್ದಾರೆ.

ಡಿಸೆಂಬರ್ 26 ರಂದು ಮೆಲ್ಬೋರ್ನ್‌ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ABOUT THE AUTHOR

...view details