ಕರ್ನಾಟಕ

karnataka

ETV Bharat / sports

ನನ್ನ ಪದಾರ್ಪಣೆ ಪಂದ್ಯ ರೋಲರ್​ ಕಾಸ್ಟರ್​ ರೈಡ್​ನಂತಿತ್ತು: ಪ್ರಸಿಧ್ ಕೃಷ್ಣ

ಪ್ರಸಿಧ್ ಕೃಷ್ಣ 8.1 ಓವರ್​ಗಳಲ್ಲಿ 54 ರನ್​ ನೀಡಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಜೇಸನ್ ರಾಯ್, ಬೆನ್​ ಸ್ಟೋಕ್ಸ್​, ಸ್ಯಾಮ್ ಬಿಲ್ಲಿಂಗ್ಸ್​ ಮತ್ತು ಟಾಮ್ ಕರ್ರನ್ ವಿಕೆಟ್ ಪಡೆದರು.

ಪ್ರಸಿಧ್ ಕೃಷ್ಣ
ಪ್ರಸಿಧ್ ಕೃಷ್ಣ

By

Published : Mar 24, 2021, 4:36 PM IST

ಪುಣೆ: ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್​ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿರುವ ಕನ್ನಡಿಗ ಪ್ರಸಿಧ್ ಕೃಷ್ಣ, ತಮಗೆ ಈ ದಿನ ರೋಲರ್​ ಕಾಸ್ಟರ್​ನಲ್ಲಿ ರೈಡ್ ಮಾಡಿದಂತಿತ್ತು ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 317 ರನ್ ​ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 251ಕ್ಕೆ ಆಲೌಟ್ ಮಾಡಿ 66 ರನ್​ಗಳ ಜಯ ಸಾಧಿಸಿತ್ತು. ಪ್ರಸಿಧ್ ಕೃಷ್ಣ 8.1 ಓವರ್ಗಳಲ್ಲಿ 54 ರನ್​ ನೀಡಿ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಜೇಸನ್ ರಾಯ್, ಬೆನ್​ ಸ್ಟೋಕ್ಸ್​, ಸ್ಯಾಮ್ ಬಿಲ್ಲಿಂಗ್ಸ್​ ಮತ್ತು ಟಾಮ್ ಕರ್ರನ್ ವಿಕೆಟ್ ಪಡೆದರು.

"ನನ್ನ ಮೊದಲ ದಿನದ ಕಾರ್ಯ ರೋಲರ್ ಕಾಸ್ಟರ್ ರೈಡ್​ನಂತಿತ್ತು. ಅದು ಸಂಪೂರ್ಣ ಮುಗಿಯುವವರೆಗೂ ಮುಗಿಯುವುದಿಲ್ಲ. ಆದರೆ ಎಲ್ಲವೂ ಉತ್ತಮವಾಗಿಯೇ ಕೊನೆಗೊಳ್ಳುತ್ತದೆ" ಎಂದು ಪಂದ್ಯ ಮುಗಿದ ಬಳಿಕ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಮೊದಲ ಮೂರು ಓವರ್​ಗಳಲ್ಲಿ 37ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಕೃಷ್ಣ ನಂತರದ 5.1 ಓವರ್​ಗಳಲ್ಲಿ 17 ರನ್ ನೀಡಿ 4 ವಿಕೆಟ್​ ಪಡೆದು ಅದ್ಭುತ ಕಮ್​ಬ್ಯಾಕ್ ಮಾಡಿದರು.

ಇದನ್ನು ಓದಿ:ಐಸಿಸಿ ಟಿ-20 ರ‍್ಯಾಂಕಿಂಗ್‌‌: ಕುಸಿದ ರಾಹುಲ್​, 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ

ABOUT THE AUTHOR

...view details