ಬ್ರಿಸ್ಬೇನ್ (ಆಸ್ಟ್ರೇಲಿಯಾ): ನಾಲ್ಕನೇ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯಾ ವಿರುದ್ಧ ಮಿಂಚಿದ ಟೀಂ ಇಂಡಿಯಾ ಆಲ್ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಇದು ಬಹಳ ವಿಶೇಷ ದಿನ ಎಂದು ಹೇಳಿದ್ದು, ಅಭಿಮಾನಿಗಳ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಭಾನುವಾರ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಶಾರ್ದುಲ್ ಠಾಕೂರ್ ಮತ್ತು ಸುಂದರ್ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ರು. ಚೊಚ್ಚಲ ಪಂದ್ಯದಲ್ಲಿ ಆಸೀಸ್ ಬೌಲರ್ಗಳ ಬೆವರಿಳಿಸಿದ ಸುಂದರ್ ಅರ್ಧಶತಕ ಸಿಡಿಸಿದ್ರು. ವಾಷಿಂಗ್ಟನ್ ಸುಂದರ್ ಆಟಕ್ಕೆ ಮನ ಸೋತ ಹಲವಾರು ಅಭಿಮಾನಿಗಳು ಮತ್ತು ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಆಟಗಾರರು ಮೆಚ್ಚುಗೆ ಸೂಚಿಸಿದ್ರು.