ಲೀಡ್ಸ್: ರೋಹಿತ್ ಶರ್ಮಾರ ಹ್ಯಾಟ್ರಿಕ್ ಶತಕ ಹಾಗೂ ಕನ್ನಡಿಗ ರಾಹುಲ್ರ ಆಕರ್ಷಕ ಶತಕದ ನೆರವಿನಿಂದ ಕೊಹ್ಲಿ ಪಡೆ ಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಲಂಕಾ ನೀಡಿದ 265 ರನ್ಗಳ ಟಾರ್ಗೆಟ್ ಅನ್ನು ಭಾರತ ತಂಡವು ರೋಹಿತ್(103) ಹಾಗೂ ರಾಹುಲ್(111)ರ ಶತಕಗಳ ನೆರವಿನಿಂದ 43.3 ಓವರ್ಗಳಲ್ಲೇ ತಲುಪುವ ಮೂಲಕ 7 ವಿಕೆಟ್ಗಳ ಸುಲಭ ಜಯ ಸಾಧಿಸಿತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ರಾಹುಲ್ 30.1 ಓವರ್ಗಳನ್ನು ಎದುರಿಸಿ 189 ರನ್ಗಳ ಜೊತೆಯಾಟ ನೀಡಿದರು. 94 ಎಸೆತಗಳನ್ನೆದುರಿಸಿದ ರೋಹಿತ್ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 103 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಕನ್ನಡಿಗ ರಾಹುಲ್ 118 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 111 ರನ್ಗಳಿಸಿದರು. ಬಳಿಕ ರೋಹಿತ್, ಕಾಸುನ್ ರಜಿತಾಗೆ ವಿಕೆಟ್ ಒಪ್ಪಿಸಿದರು.
ರಾಹುಲ್ ಔಟಾಗುವ ಮುನ್ನ ಕೊಹ್ಲಿ ಜೊತೆ ಸೇರಿ 56 ರನ್ಗಳ ಜೊತೆಯಾಟವಾಡಿದರು. 111 ರನ್ ಗಳಿಸಿದ್ದ ರಾಹುಲ್ ಅವರನ್ನು ಮಲಿಂಗಾ ಔಟ್ ಮಾಡಿದರು. ರಾಹುಲ್ ನಂತರ ಬಂದ ಪಂತ್ 4 ರನ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಕೊಹ್ಲಿ ಔಟಾಗದೆ 34 ಹಾಗೂ ಪಾಂಡ್ಯ ಔಟಾಗದೆ 7 ರನ್ಗಳಿಸಿ ಗೆಲುವಿನ ದಡ ಸೇರಿಸಿದರು.
ಶ್ರೀಲಂಕಾ ಪರ ಮಲಿಂಗಾ, ರಜಿತಾ ಹಾಗೂ ಇಸುರು ಉದಾನ ತಲಾ ಒಂದು ವಿಕೆಟ್ ಪಡೆದರು. ಈ ಸೋಲಿನ ಮೂಲಕ ಲಂಕಾ 2019ರ ವಿಶ್ವಕಪ್ ಟೂರ್ನಿಯಲ್ಲಿ 4 ನೇ ಸೋಲನುಭವಿಸಿ ಅಂಕಪಟ್ಟಿಯಲ್ಲಿ 6 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕೊಹ್ಲಿ ಪಡೆ ಈ ಗೆಲುವಿನೊಂದಿಗೆ ಲೀಗ್ನಲ್ಲಿ ಆಡಿದ 9 ಪಂದ್ಯಗಳಲ್ಲಿ 7ನೇ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತು. ಟೂರ್ನಿಯಲ್ಲಿ 5ನೇ ಶತಕ ಸಿಡಿಸಿದ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.