ದುಬೈ : ಎರಡನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಮತ್ತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಂತರ, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದ ಅಗ್ರ -10 ರಲ್ಲಿ ಸ್ಥಾನ ಪಡೆದಿದ್ದಾರೆ. ರೋಹಿತ್ ಆರು ಸ್ಥಾನ ನೆಗೆದಿದ್ದು, ಟೇಬಲ್‌ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ.
ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ್ದು, ಇಂಗ್ಲೆಂಡ್‌ನ ಜೋ ರೂಟ್ ಮತ್ತು ಜ್ಯಾಕ್ ಲೀಚ್ ಕೂಡ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಮಿಂಚಿದ ಬಳಿಕ ಮೇಲಕ್ಕೇರಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗಳೊಂದಿಗೆ ರೋಹಿತ್ ಅಗ್ರ ಸ್ಕೋರ್ ಮಾಡಿದ್ದರು ಮತ್ತು ಎರಡನೆಯದರಲ್ಲಿ 25 ರನ್‌ಗಳಲ್ಲಿ ಅಜೇಯರಾಗಿ ಉಳಿದುಕೊಂಡರು. ಅವರ ರೇಟಿಂಗ್ ಪಾಯಿಂಟ್‌ಗಳ ಒಟ್ಟು ಮೊತ್ತವು 742 ಆಗಿದ್ದು, 2019ರ ಅಕ್ಟೋಬರ್‌ನಲ್ಲಿ 10ನೇ ಸ್ಥಾನದಲ್ಲಿದ್ದಾಗ ಗಳಿಸಿದ್ದ 722ರ ಅತ್ಯುತ್ತಮ ಮೊತ್ತಕ್ಕಿಂತ 20 ಹೆಚ್ಚಾಗಿದೆ.