ಕರ್ನಾಟಕ

karnataka

ETV Bharat / sports

ಏಕದಿನ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಕೊಹ್ಲಿ-ರೋಹಿತ್​ ಪಾರುಪತ್ಯ... ಬೌಲಿಂಗ್​ನಲ್ಲಿ ಬುಮ್ರಾಗೆ 2ನೇ ಸ್ಥಾನ

ಬ್ಯಾಟಿಂಗ್​ ವಿಭಾಗದಲ್ಲಿ ವಿರಾಟ್​ 871 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್​ ಶರ್ಮಾ (855) ಹಾಗೂ ಪಾಕಿಸ್ಥಾನದ ಬಾಬರ್​ ಅಜಮ್​( 829) ರಾಸ್​ ಟೇಲರ್​(818) ಹಾಗೂ ಫಾಫ್​ ಡು ಪ್ಲೆಸಿಸ್​(790) ಅಂಕಗಳೊಂದಿಗೆ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ-ರೋಹಿತ್​ ಪಾರುಪತ್ಯ
ಕೊಹ್ಲಿ-ರೋಹಿತ್​ ಪಾರುಪತ್ಯ

By

Published : Aug 5, 2020, 6:55 PM IST

ದುಬೈ:ಇಂಗ್ಲೆಂಡ್​ ಮತ್ತು ಐರ್ಲೆಂಡ್​ ಸರಣಿ ಮುಗಿದ ಬಳಿಕ ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮೊದಲ ಸ್ಥಾನದಲ್ಲಿಮುಂದುವರಿದರೆ ರೋಹಿತ್​ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್​ ವಿಭಾಗದಲ್ಲಿ ವಿರಾಟ್​ 871 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್​ ಶರ್ಮಾ (855) ಹಾಗೂ ಪಾಕಿಸ್ಥಾನದ ಬಾಬರ್​ ಅಜಮ್​( 829) ರಾಸ್​ ಟೇಲರ್​(818) ಹಾಗೂ ಫಾಫ್​ ಡು ಪ್ಲೆಸಿಸ್​(790) ಅಂಕಗಳೊಂದಿಗೆ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ಪಾಲ್​ ಸ್ಟಿರ್ಲಿಂಗ್​ - ಆ್ಯಂಡಿ ಬಲ್ಬಿರ್ನಿ

ಇಂಗ್ಲೆಂಡ್​ ವಿರುದ್ಧ ಶತಕ ಸಿಡಿಸಿದ ಐರ್ಲೆಂಡ್​ ತಂಡ ನಾಯಕ ಬಲ್ಬಿರ್ನಿ ನಾಲ್ಕು ಸ್ಥಾನ ಏರಿಕೆ ಕಂಡು 42 ಕ್ಕೆ, ಸ್ಟಿರ್ಲಿಂಗ್​ ಒಂದು ಸ್ಥಾನ ಮೇಲೇರಿ 26 ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಮಾರ್ಗನ್​ ಕೂಡ 2 ಸ್ಥಾನ ಮೇಲೇರಿದ್ದು 22ಕ್ಕೇ ಸ್ಥಾನ ಪಡೆದಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಕಿವೀಸ್​ ಬೌಲರ್​ ಟ್ರೆಂಟ್ ಬೌಲ್ಟ್​(722) ಮೊದಲ ಸ್ಥಾನದಲ್ಲಿ, ಭಾರತದ ಜಸ್​ಪ್ರೀತ್​ ಬುಮ್ರಾ (719) 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 701 ಅಂಕಗಳೊಂದಿಗೆ ಅಫ್ಘಾನಿಸ್ತಾನದ ಮುಜಿಬ್​ ಉರ್ ರೆಹಮಾನ್​ 3ನೇ ಸ್ಥಾನದಲ್ಲಿದ್ದಾರೆ. ​

ABOUT THE AUTHOR

...view details