ಕರ್ನಾಟಕ

karnataka

ETV Bharat / sports

ಹ್ಯಾಟ್ರಿಕ್ ವಿಕೆಟ್​​ ಸಾಧನೆ... ನಾಯಕ ವಿರಾಟ್​ಗೆ ಕ್ರೆಡಿಟ್​ ನೀಡಿದ ಬುಮ್ರಾ - ಹರ್ಭಜನ್​ ಸಿಂಗ್

ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಪಡೆದ ಬುಮ್ರಾ ತನ್ನ ಸಾಧನೆಯ ಕ್ರೆಡಿಟ್​​ಅನ್ನ ನಾಯಕ ವಿರಾಟ್​ ಕೊಹ್ಲಿಗೆ ನೀಡಿದ್ದಾರೆ.

ವಿರಾಟ್​ಗೆ ಕ್ರೆಡಿಟ್​ ನೀಡಿದ ಬುಮ್ರಾ

By

Published : Sep 1, 2019, 1:31 PM IST

ಜಮೈಕಾ:ವೆಸ್ಟ್​ ಇಂಡೀಸ್​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಸೂಪರ್​ ಸ್ಪೆಲ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್​ ಬುಮ್ರಾ ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದುಕೊಂಡಿದ್ದಾರೆ.

ಅಂತಿಮ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನ 8ನೇ ಓವರ್​ನಲ್ಲಿ ದಾಳಿಗಿಳಿದ ಬುಮ್ರಾ ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್ ವಿಕೆಟ್​ ಪಡೆದ್ರು. 4ನೇ ಎಸೆತದಲ್ಲಿ ರೋಸ್ಟನ್ ಚೇಸ್ ಎಲ್​ಬಿ ಬಲೆಗೆ ಬಿದ್ರು. ಆದ್ರೆ ಚೆಂಡು ಬ್ಯಾಟ್​ಗೆ ತಾಗಿದೆ ಎಂದು ತಿಳಿದ ಬುಮ್ರಾ ಅಂಪೈರ್​ಗೆ ಬಲವಾಗಿ ಮನವಿ ಸಲ್ಲಿಸಲಿಲ್ಲ.

ಆದ್ರೆ ವಿರಾಟ್​ ಕೊಹ್ಲಿ ರಿವ್ಯೂ​ ಪಡೆದುಕೊಳ್ಳಲು ತೀರ್ಮಾನ ಮಾಡಿದ್ರು. ಅದರಂತೆ ರೋಸ್ಟನ್ ಚೇಸ್​ ಪೆವಿಲಿಯನ್​ ಸೇರುವಂತಾಯ್ತು. ಈ ಮೂಲಕ ಬುಮ್ರಾಗೆ ಹ್ಯಾಟ್ರಿಕ್ ವಿಕೆಟ್​ ಗರಿ ಒಲಿಯಿತು.

ತನ್ನ ಈ ಹ್ಯಾಟ್ರಿಕ್ ಸಾಧನೆ ಬಗ್ಗೆ ಬಿಸಿಸಿಐ ಟಿವಿಯಲ್ಲಿ ಕೊಹ್ಲಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ಬುಮ್ರಾ, ರೋಸ್ಟನ್ ಚೇಸ್​ ವಿಕೆಟ್​ ಪಡೆದದ್ದು ವಿರಾಟ್​​ ಅವರಿಂದ. ನಾನು ನಾಟ್​ ಔಟ್​ ಇರಬಹುದೆಂದು ಭಾವಿಸಿದ್ದೆ. ಆದ್ರೆ ಕೊಹ್ಲಿ ತೀರ್ಮಾನದಿಂದ ಹ್ಯಾಟ್ರಿಕ್​ ವಿಕೆಟ್​ ಪಡೆಯುವಂತಾಯ್ತು. ಈ ಹ್ಯಾಟ್ರಿಕ್​ ಸಾಧನೆಯನ್ನ ಕೋಹ್ಲಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ಹರ್ಭಜನ್​ ಸಿಂಗ್, ಇರ್ಫಾನ್​ ಪಠಾಣ್ ನಂತರ ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. ಹರ್ಭಜನ್​ ಸಿಂಗ್​ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ಪಡೆದಿದ್ರೆ, ಇರ್ಫಾನ್​ ಪಠಾಣ್ 2006ರಲ್ಲಿ ನಡೆದ ಪಾಕ್ ​ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್​ ಪಡೆದಿದ್ದರು.

ABOUT THE AUTHOR

...view details