ಕರ್ನಾಟಕ

karnataka

ETV Bharat / sports

'19ರ ವಿಶ್ವಕಪ್​ ಕಳಪೆ ಪ್ರದರ್ಶನ ಉದ್ದೇಶಪೂರ್ವಕ'... ಎಲ್ಲರ ಹೆಸರು ರಿವೀಲ್ ಮಾಡುವುದಾಗಿ ಬೆದರಿಸಿದ ನೈಬ್​​​​!

ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ಬಹುದೊಡ್ಡ ಮಾಫಿಯಾ ನಡೆಯುತ್ತಿದೆ ಎನ್ನುವ ಅಚ್ಚರಿಯ ವಿಷಯವನ್ನು ಮಾಜಿ ನಾಯಕ ಗುಲ್ಬಾಡಿನ್ ನೈಬ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.

Gulbadin Naib threatens to name Afghanistan players who involved in corruption
ಮಾಜಿ ನಾಯಕ ಗುಲ್ಬಾಡಿನ್ ನೈಬ್

By

Published : Dec 13, 2019, 10:00 AM IST

ಹೈದರಾಬಾದ್:ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ಮಾಜಿ ನಾಯಕ ಗುಲ್ಬಾಡಿನ್ ನೈಬ್ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.

ಟ್ವಿಟರ್ ಮೂಲಕ ಒಂದಷ್ಟು ವಿಚಾರ ಹಂಚಿಕೊಂಡಿರುವ ನೈಬ್​, ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ಬಹುದೊಡ್ಡ ಮಾಫಿಯಾ ನಡೆಯುತ್ತಿದೆ ಎನ್ನುವ ಅಚ್ಚರಿಯ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ. ನೈಬ್ ಟ್ವಿಟರ್ ಬರಹ ಇಲ್ಲಿದೆ...

"ನನ್ನ ಪ್ರೀತಿಯ ಅಫ್ಘನ್ನರೇ, ಯಾವುದೇ ಆಟಗಾರನ ಅಥವಾ ಮಂಡಳಿಯ ವಿರುದ್ಧ ವೈಯಕ್ತಿಕ ದ್ವೇಷದಿಂದ ನಾನು ಈಗ ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ. ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಭ್ರಷ್ಟಾಚಾರ, ಅಸಭ್ಯ ವರ್ತನೆ ಹಾಗೂ ಮೋಸದಲ್ಲಿ ಭಾಗಿಯಾದ ಪ್ರತಿಯೊಬ್ಬರ ಹೆಸರನ್ನೂ ನಾನು ಬಹಿರಂಗಪಡಿಸುತ್ತೇನೆ."

"ನಾನು ಯಾಕೆ ಈ ವಿಚಾರವನ್ನು ಈ ಮೊದಲು ಮಾತನಾಡಿಲ್ಲ ಎನ್ನುವುದನ್ನು ಹಲವರು ನನ್ನ ಬಳಿ ಕೇಳುತ್ತೀರ ಎನ್ನುವುದು ನನಗೆ ತಿಳಿದಿದೆ. ನನ್ನನ್ನು ಮೂಲೆಗುಂಪು ಮಾಡಲಾಗಿದೆ ಮತ್ತು ಈ ವಿಚಾರವನ್ನು ಶೀಘ್ರದಲ್ಲಿ ಬಗೆಹರಿಸುವ ಭರವಸೆಯನ್ನು ನನಗೆ ಮಂಡಳಿ ನೀಡಿತ್ತು."

ಇದಲ್ಲದೆ ಇನ್ನೆರಡು ಟ್ವೀಟ್ ಮಾಡಿರುವ ನೈಬ್, 2019ರ ವಿಶ್ವಕಪ್ ಟೂರ್ನಿಯಲ್ಲಿ ಕೆಲ ಆಟಗಾರರು ಉದ್ದೇಶಪೂರ್ವಕವಾಗಿ ಕಳಪೆ ಪ್ರದರ್ಶನ ನೀಡಿದ್ದರು. ಆ ಎಲ್ಲ ಆಟಗಾರರ ಹೆಸರನ್ನು ರಿವೀಲ್ ಮಾಡುವುದಾಗಿ ನೈಬ್ ಟ್ವಿಟರ್​ನಲ್ಲಿ ಬರೆದಿದ್ದಾರೆ.

ವಿಂಡೀಸ್​ ವಿರುದ್ಧ ಅಫ್ಘಾನ್​ ಕಳಪೆ ಪ್ರದರ್ಶನ: ವರ್ಷದಲ್ಲಿ ಮೂರು ಬಾರಿ ನಾಯಕತ್ವ ಬದಲಿದ ಎಸಿಬಿ!

ವಿಶ್ವಕಪ್ ಟೂರ್ನಿಗೆ ಮುನ್ನ ಗುಲ್ಬಾಡಿನ್ ನೈಬ್​ರನ್ನು ಅಫ್ಘಾನಿಸ್ತಾನದ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ವಿಶ್ವಕಪ್​ನಲ್ಲಿ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೂರ್ನಿ ಬಳಿಕ ನೈಬ್​​ರನ್ನು ಕೆಳಗಿಳಿಸಿ ಯುವ ಆಟಗಾರ ರಶೀದ್ ಖಾನ್​ಗೆ ಜವಾಬ್ದಾರಿ ವಹಿಸಲಾಗಿತ್ತು. ಎರಡು ದಿನದ ಹಿಂದೆ ರಶೀದ್ ಖಾನ್​​ರನ್ನು ಕೆಳಗಿಳಿಸಿ ಅಸ್ಗರ್ ಅಫ್ಘನ್​ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ABOUT THE AUTHOR

...view details