ಕರ್ನಾಟಕ

karnataka

ETV Bharat / sports

ಇದು ಯಾವಾಗ ತೆಗೆದ ಫೋಟೋ... ನಾಸಿರ್​ ಹುಸೇನ್ ಕಾಲೆಳೆದ ದಾದಾ! - ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

ನಾಸಿರ್​ ಹುಸೇನ್ ಜೊತೆಯಲ್ಲಿ ನಾಟ್​ವೆಸ್ಟ್​ ಸರಣಿ ಟ್ರೋಫಿ ಹಿಡಿದು ನಿಂತಿರುವ ಫೋಟೋ ಟ್ವೀಟ್​ ಮಾಡಿರುವ ಗಂಗೂಲಿ, ಇಂಗ್ಲೆಂಡ್​ ತಂಡದ ಮಾಜಿ ನಾಯಕನ ಕಾಲೆಳೆದಿದ್ದಾರೆ.

Ganguly, Hussain engage in funny banter
ನಾಸಿರ್​ ಹುಸೇನ್ ಕಾಲೆಳೆದ ದಾದಾ

By

Published : Jun 20, 2020, 4:08 PM IST

ಕೋಲ್ಕತ್ತಾ:ಟೀಂ ಇಂಡಿಯಾ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಳೇ ಪೋಟೋವೊಂದನ್ನು ಟ್ವೀಟ್​​ ಮಾಡಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಕಾಲೆಳೆದಿದ್ದಾರೆ.

ನಾಸಿರ್​ ಹುಸೇನ್ ಮತ್ತು ಸೌರವ್​ ಗಂಗೂಲಿ 2002ರ ನಾಟ್​ವೆಸ್ಟ್​ ಸರಣಿ ಟ್ರೋಫಿ ಹಿಡಿದು ನಿಂತಿರುವ ಫೋಟೋ ಟ್ವೀಟ್​ ಮಾಡಿದ್ದು, ಈ ಚಿತ್ರ ಯಾವಾಗ ತೆಗೆದಿದ್ದು, ವಯಸ್ಸಾದ ಕಾರಣ ನನಗೆ ಮರೆತು ಹೋಗಿದೆ. ಯಾರದರು ಸಹಾಯ ಮಾಡಿ ಎಂದು ನಾಸಿರ್ ಹುಸೇನ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಗಂಗೂಲಿ ಟ್ವೀಟ್​​ಗೆ ನಾಸಿರ್ ಹುಸೇನ್​ ಕಾರ್ಟೂನ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಗೊಂಬೆಯೊಂದು ಪೊದೆಯ ಮರೆಯಲ್ಲಿ ಮುಖ ಮುಚ್ಚಿಕೊಳ್ಳುವ ಗಿಫ್​(GIF) ಪೋಸ್ಟ್ ಮಾಡಿದ್ದಾರೆ. ಇತ್ತ 2002 ನಾಟ್​ವೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮದ್​ ಕೈಫ್​ ಕೂಡ ನಾಸಿರ್ ಹುಸೇನ್​​ ಕಾಲೆಳೆದಿದ್ದಾರೆ.

'ಹಾಯ್​ ನಾಸಿರ್ ನೀವು ಯಾರನ್ನೋ ಬಸ್​ ಡ್ರೈವರ್​ ಎಂದು ಕರೆದಿದ್ರಿ. ಅಂತಿಮವಾಗಿ ನಾವು ಲಾರ್ಡ್ಸ್​ ಮೈದಾನದ ಬಾಲ್ಕನಿಯಲ್ಲಿ ದಾದಾ ಅವರ 8 ಪ್ಯಾಕ್ಸ್​ ನೋಡುವಂತಾಯ್ತು ಎಂದು ಅಂದು ಗಂಗೂಲಿ ಕಾಲೆಳೆದಿದ್ದ ನಾಸಿರ್ ಹುಸೇನ್​ಗೆ ತಿರುಗೇಟು ನೀಡಿದ್ದಾರೆ.

2002ರ ಜುಲೈ 13ರಂದು ಲಾರ್ಡ್ಸ್​ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ನಾಟ್​ವೆಸ್ಟ್ ಸರಣಿಯ ಫೈನಲ್​ ಪಂದ್ಯ ನಡೆದಿತ್ತು. ಇಂಗ್ಲೆಂಡ್​ ನೀಡಿದ್ದ 326 ರನ್​ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ, ಮೊಹಮ್ಮದ್​ ಕೈಫ್​ ಅವರ ಅಜೆಯ 87 ಮತ್ತು ಯವರಾಜ್​ ಸೀಂಗ್ ಅವರ 69 ರನ್​ಗಳ ನೆರವಿನಿಂದ ಲಾರ್ಡ್ಸ್​ ಮೈದಾನದಲ್ಲಿ ಐತಿಹಾಸಿಕ ಸರಣಿ ಗೆದ್ದಿತ್ತು.

ABOUT THE AUTHOR

...view details