ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಉತ್ತಮಗೊಳ್ಳಬೇಕಾದರೆ ಕೆಲ ನಿಯಮ ಬದಲಾಗಬೇಕು.. ಸಚಿನ್​ ಮಾತಿಗೆ ಧ್ವನಿಗೂಡಿಸಿದ ಭಜ್ಜಿ - ಡಿಆರ್​ಎಸ್​

ಡಿಆರ್​ಎಸ್​ ನಿಯಮದ ಬಗ್ಗೆ ಸಚಿನ್ ತೆಂಡೂಲ್ಕರ್​ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಹರ್ಭಜನ್​ ಸಿಂಗ್ ಕೂಡ ಅದಕ್ಕೆ ಧ್ವನಿಗೂಡಿಸಿದ್ದು ಕ್ರಿಕೆಟ್​ ಉತ್ತಮಗೊಳ್ಳಬೇಕಾದ್ರೆ ಕೆಲ ನಿಯಮಗಳು ಬದಲಾಗಬೇಕು ಎಂದಿದ್ದಾರೆ..

Harbhajan
ಹರ್ಭಜನ್​ ಸಿಂಗ್​

By

Published : Jul 12, 2020, 4:49 PM IST

ನವದೆಹಲಿ :ಯಾವುದೇ ತಂಡ ಲೆಗ್-ಬಿಫೋರ್ ವಿಕೆಟ್ (ಎಲ್‌ಬಿಡಬ್ಲ್ಯೂ) ನಿರ್ಧಾರಕ್ಕೆ ಸಂಬಂಧಿಸಿದಂತೆ ರಿವಿವ್ಯೂ ತೆಗೆದುಕೊಂಡಾಗ ಅಂಪೈರ್​ ಕಾಲ್​ ಕರೆಯನ್ನು ದೂರವಿಡಬೇಕು ಎಂದು ಭಾರತ ತಂಡದ ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಭಾರತದ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್​, ಲಾರಾ ಅವರೊಂದಗಿನ ಆನ್​ಲೈನ್​ ಸಂವಾದದ ವೇಳೆ ಡಿಆರ್​ಎಸ್​ ನಿಯಮದ ಕುರಿತು, ಎಲ್​ಬಿಡಬ್ಲ್ಯೂ ಕರೆಗೆ ರಿವ್ಯೂವ್​ ತಗೆದುಕೊಂಡ ವೇಳೆ, ಚೆಂಡು ಸ್ಟಂಪ್​ಗೆ ಎಷ್ಟು ಪ್ರಮಾಣದಲ್ಲಿ ತಾಗಿದೆ ಎನ್ನುವುದನ್ನು ಪರಿಗಣಿಸದೆ, ಸ್ಟಂಪ್​ಗೆ ಚೆಂಡು ಟಚ್​ ಆಗಿದ್ದರೆ ಅಂಪೈರ್​ ತೀರ್ಮಾನ ಏನೇ ಆಗಿದ್ದರೂ ಬ್ಯಾಟ್ಸ್​ಮನ್​ ಔಟ್​ಎಂದು ತೀರ್ಪು ನೀಡಬೇಕು. ಇದು ತಂತ್ರಜ್ಞಾನವನ್ನು ಉಪಯೋಗದ ಉದ್ದೇಶವಾಗಿದೆ. ತಂತ್ರಜ್ಞಾನವೂ ಶೇ.100ರಷ್ಟು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಡಿಆರ್​ಎಸ್​

ಇದಕ್ಕೆ ಹರ್ಭಜನ್​ ಸಿಂಗ್​ ಕೂಡ ಧ್ವನಿಗೂಡಿಸಿದ್ದು, 'ನಿಮ್ಮ ಅಭಿಪ್ರಾಯ 1000 ಪರ್ಸೆಂಟ್​ ಸರಿಯಿದೆ. ಚೆಂಡು ಸ್ಟಂಪ್​ಗೆ ತಾಗಲಿ ಅಥವಾ ಮುತ್ತು ನೀಡಿರಲಿ, ಅದು ಔಟ್​ ಎಂದು ತೀರ್ಮಾನಿಸಬೇಕು. ಯಾವ ಭಾಗಕ್ಕೆ ಚೆಂಡು ತಾಗಿದೆ ಎನ್ನುವುದು ಮುಖ್ಯವಲ್ಲ. ಆಟ ಉತ್ತಮಗೊಳ್ಳಬೇಕಾದರೆ ಕೆಲವು ನಿಯಮಗಳು ಬದಲಾಗಬೇಕು. ಅದರಲ್ಲಿ ಇದು ಒಂದು' ಎಂದು ಭಜ್ಜಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್​ ಜೊತೆ ವಿಡಿಯೋವೊಂದನ್ನು ಶೇರ್​ ಮಾಡಿದ್ದ ಸಚಿನ್ " ಚೆಂಡು ಸ್ಟಂಪ್​​ಗೆ ಯಾವುದೇ ಆ್ಯಂಗಲ್​​ನಲ್ಲಿ ಬಡಿದ್ರೂ ಅದನ್ನು ಔಟ್​ ಎಂದು ಘೋಷಿಸುವ ಮೂಲಕ, ಬೌಲರ್​ ಪರ ತೀರ್ಪು ನೀಡಬೇಕು. ಅಂಪೈರ್​ ಎಲ್​ಬಿಡಬ್ಲ್ಯೂ ವಿಷಯದಲ್ಲಿ ನಾಟೌಟ್​ ಎಂದು ತೀರ್ಪು ನೀಡಿದ್ದ ಸಂದರ್ಭದಲ್ಲಿ ಫೀಲ್ಡ್​ ಟೀಂ​ ರಿವ್ಯೂವ್​ ತೆಗೆದುಕೊಂಡಾಗ, ರೀಪ್ಲೇನಲ್ಲಿ ಚೆಂಡು 50%ಕ್ಕಿಂತ ಹೆಚ್ಚುಭಾಗ ಸ್ಟಂಪ್​ಗೆ ತಾಗಿದ್ದರೆ ಮಾತ್ರ ಔಟ್​ ಎಂದು ತೀರ್ಪು ನೀಡುತ್ತಾರೆ. ಇಲ್ಲವಾದ್ರೆ ಆನ್​ಫೀಲ್ಡ್​ ತೀರ್ಪು ಅಂತಿಮ ಎಂದು ಹೇಳಲಾಗುತ್ತದೆ. ಐಸಿಸಿಯ ಈ ನಿಯಮವನ್ನು ನಾನು ಒಪ್ಪುವುದಿಲ್ಲ ಎಂದು ಸಚಿನ್​ ಹೇಳಿದ್ದಾರೆ.

ABOUT THE AUTHOR

...view details