ಕರ್ನಾಟಕ

karnataka

By

Published : Aug 29, 2019, 7:00 PM IST

ETV Bharat / sports

ವಿಶ್ವಕಪ್​ ಗೆದ್ದ ಆಂಗ್ಲರಿಗೆ WWE ಚಾಂಪಿಯನ್​​​​ಷಿಪ್​ ಬೆಲ್ಟ್​​... ಪ್ರಶಸ್ತಿ ಜೊತೆ ಪೋಸ್​ ನೀಡಿದ ಕ್ರಿಕೆಟರ್​​!

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿರುವ ಇಂಗ್ಲೆಂಡ್​ ಕ್ರಿಕೆಟ್​ ತಂಡಕ್ಕೆ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್​ನ ಉಪಾಧ್ಯಕ್ಷ ಟ್ರಿಪಲ್​​ ಎಚ್​ ವಿಶೇಷ ಉಡುಗೊರೆ ಕಳುಹಿಸಿದ್ದಾರೆ.

ಚಾಂಪಿಯನ್‌ಶಿಪ್ ಬೆಲ್ಟಿ ಜತೆ ಪೋಸ್​

ಲಂಡನ್​​:ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ರೋಚಕ ಗೆಲುವು ದಾಖಲು ಮಾಡಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದಿದೆ. ಇದೀಗ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(WWE)ನಿಂದ ವಿಶೇಷ ಗಿಪ್ಟ್​ ಪಡೆದುಕೊಂಡಿದೆ.

ಚಾಂಪಿಯನ್‌ಶಿಪ್ ಬೆಲ್ಟಿ ಜತೆ ಪೋಸ್​

ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ (ಜುಲೈ 14,2019) ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಸೂಪರ್ ಓವರ್‌ನಲ್ಲಿ ಮತ್ತೆ ಫಲಿತಾಂಶ ಟೈ ಆಗಿತ್ತು. ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಇದೇ ವೇಳೆ ಆಂಗ್ಲರ ತಂಡಕ್ಕೆ ಶುಭಾಶಯ ಕೋರಿದ್ದ 14 ಬಾರಿಯ ವಿಶ್ವಚಾಂಪಿಯನ್ ಹಾಗೂ WWE ಉಪಾಧ್ಯಕ್ಷ ಟ್ರಿಪಲ್ ಎಚ್ ತಂಡಕ್ಕೆ ವಿಶೇಷ ಉಡುಗೊರೆ ನೀಡುವುದಾಗಿ ಹೇಳಿದ್ದರು. ಇದೀಗ ತಂಡಕ್ಕೆ ಚಾಂಪಿಯನ್‌ಶಿಪ್ ಬೆಲ್ಟಿ ಕಳುಹಿಸಿಕೊಟ್ಟಿದ್ದು, ಈ ಚಾಂಪಿಯನ್‌ಶಿಪ್‌ ಈಗ ನಿಮ್ಮದು ಎಂದಿದ್ದಾರೆ.

ಚಾಂಪಿಯನ್‌ಶಿಪ್ ಬೆಲ್ಟಿ ಜತೆ ಪೋಸ್​

ಈ ಚಾಂಪಿಯನ್​ಶಿಪ್​​ ಬೆಲ್ಟ್​​ನೊಂದಿಗೆ ಇಂಗ್ಲೆಂಡ್ ತಂಡದ ಪ್ಲೇಯರ್ಸ್ ಜಾಸನ್​ ರಾಯ್​, ಜೋಫರ್​ ಆರ್ಚರ್​,ರೂಟ್​,ಜೋಶ್​ ಬಟ್ಲರ್​​​ ಪೋಸ್​ ನೀಡಿದ್ದಾರೆ.

ABOUT THE AUTHOR

...view details