ಜಮೈಕಾ:ಕ್ರಿಕೆಟ್ ಜಗತ್ತಿಗೆ ಕ್ರಿಸ್ ಗೇಲ್ ಒಬ್ಬ ಸ್ಫೋಟಕ ಆಟಗಾರ, ಪ್ರತಿಕ್ಷಣವನ್ನು ಮೈದಾನದಲ್ಲಿ ಅಥವಾ ಮೈದಾನದ ಹೊರಗೆ ಎಂಜಾಯ್ ಮಾಡುವ ಯುನಿವರ್ಸಲ್ ಬಾಸ್ರ ಯಶಸ್ವಿ ಜೀವನದ ಹಿಂದೆ ಕಣ್ಣಲ್ಲಿ ನೀರು ಬರುವ ನೋವಿನ ಕಥೆಗಳಿವೆ.
ಟಿ-20 ಕ್ರಿಕೆಟ್ನಲ್ಲಿ ವಿಶ್ವದ ಶ್ರೇಷ್ಠರಾಗಿರುವ ಕ್ರಿಸ್ ಗೇಲ್ ಹುಟ್ಟಿದ್ದು ಕಡುಬಡತನದಲ್ಲಿ. ಅವರ ಜೀವನ ಶುರುವಾಗಿದ್ದು ಸಣ್ಣ ಗುಡಿಸಿಲಿನಲ್ಲಿ. ಅವರ ತಂದೆ ಒಬ್ಬ ಪೊಲೀಸ್ನ 5ನೇ ಮಗ. 6 ಮಕ್ಕಳಾದ್ದರಿಂದ ಬಾಲ್ಯದಲ್ಲಿ ಅವರ ತಂದೆಗೆ ಕಾಲೇಜು ಶುಲ್ಕವನ್ನು ಕಟ್ಟಲು ಹಣವಿರಲಿಲ್ಲ. ಹಾಗಾಗಿ ಅವರ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದರು.
ಮನೆಯಲ್ಲಿ ತೀವ್ರ ಬಡತನವಿದ್ದರಿಂದ ಊಟಕ್ಕಾಗಿ ರಸ್ತೆಯಲ್ಲಿ ಪ್ಲಾಸ್ಟಿಕ್ ಬಾಟೆಲ್, ಚಿಂದಿ ಆಯುತ್ತಿದ್ದ ಕ್ರಿಸ್ಗೇಲ್ ಒಮ್ಮೊಮ್ಮೆ ಹಸಿವು ತಾಳಲಾರದೇ ಕಳ್ಳತನವನ್ನು ಕೂಡ ಮಾಡಿದ್ದಾರೆ. ಒಂದು ವೇಳೆ ನಾನು ಕ್ರಿಕೆಟರ್ ಆಗಿರದಿದ್ದರೆ ಇನ್ನು ಕೂಡ ನನ್ನ ಜೀವ ರಸ್ತೆಯಲ್ಲೆ ಕಳಿಯಬೇಕಿತ್ತು ಎಂಬ ವಿಚಾರವನ್ನು ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿ ಕಣ್ಣೀರಿಟ್ಟಿದ್ದರು.
ಆದರೆ, 19 ವರ್ಷಕ್ಕೆ ಕ್ರಿಕೆಟ್ಗೆ ಎಂಟ್ರಿಕೊಟ್ಟ ನಂತರ ಅವರ ಜೀವನ ಬದಲಾಯಿತು. ಭಾರತದ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು ಬರೋಬ್ಬರಿ 20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಬಾಲ್ಯದಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿರುವ ಅವರು ಇಂದು ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊನೆಯ ಭಾರಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ಅಭಿಮಾನಿಗಳ ಪಾಲಿನ ದುಃಖದ ವಿಷಯ.