ಆಂಟಿಗುವಾ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಈಗಾಗಲೇ ಆರಂಭಗೊಂಡಿರುವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆರಿಬಿಯನ್ ತಂಡದೊಂದಿಗೆ ಸೆಣಸಾಟ ನಡೆಸುತ್ತಿದೆ.
'ಡಿಟಾಕ್ಸ್ ಯುವರ್ ಈಗೋ'... ಟೆಸ್ಟ್ ಪಂದ್ಯದ ನಡುವೆ ಬುಕ್ ಓದಿದ ಕೊಹ್ಲಿ, ಸಿಕ್ಕಾಪಟ್ಟೆ ಟ್ರೋಲ್! - ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬುಕ್ ಓದುತ್ತಿರುವ ಪೋಟೋ ವೈರಲ್ ಆಗಿದ್ದು, ಇದೀಗ ಅದೇ ವಿಷಯವನ್ನಿಟ್ಟುಕೊಂಡು ನೆಟ್ಟಿಜನ್ಸ್ ಟ್ರೋಲ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ/Virat kohli
ಇದರ ಮಧ್ಯೆ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತುಕೊಂಡು Detox Your Ego ಎಂಬ ಪುಸ್ತಕ ಓದುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಟೀಂ ಇಂಡಿಯಾ ಕೆರಿಬಿಯನ್ ನಾಡಿನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಅಜಿಂಕ್ಯ ರಹಾನೆ(81) ಹಾಗೂ ರವೀಂದ್ರ ಜಡೇಜಾ(58)ರನ್ಗಳ ನೆರವಿನಿಂದ 297ರನ್ಗಳಿಕೆ ಮಾಡಿದೆ. ಇದರ ಬೆನ್ನತ್ತಿರುವ ವೆಸ್ಟ್ ಇಂಡೀಸ್ 8ವಿಕೆಟ್ನಷ್ಟಕ್ಕೆ 189ರನ್ಗಳಿಕೆ ಮಾಡಿದೆ.