ಕರ್ನಾಟಕ

karnataka

ETV Bharat / sports

ನಮ್ಮ ಪ್ಲೇಯರ್ಸ್​ಗೆ ಕೋವಿಡ್​​ ವ್ಯಾಕ್ಸಿನ್ ನೀಡಿ: ಬಿಸಿಸಿಐ ಬಳಿ ಡೆಲ್ಲಿ ಕ್ಯಾಪಿಟಲ್ಸ್​ ಮನವಿ! - ಡೆಲ್ಲಿ ಕ್ಯಾಪಿಟಲ್​ ಕೋವಿಡ್ ವ್ಯಾಕ್ಸಿನ್​

ಏಪ್ರಿಲ್​ 9ರಿಂದ ಇಂಡಿಯನ್​ ಪ್ರೀಮಿಯರ್ ಲೀಗ್​​ ಟೂರ್ನಿ ಆರಂಭಗೊಳ್ಳಲಿದ್ದು, ಮುಂದಿನ ವಾರದಿಂದ ಎಲ್ಲ ತಂಡಗಳು ತರಬೇತಿ ಶಿಬಿರ ಆರಂಭ ಮಾಡುವ ಸಾಧ್ಯತೆ ದಟ್ಟವಾಗಿದೆ.

Delhi Capitals
Delhi Capitals

By

Published : Mar 20, 2021, 5:49 PM IST

ನವದೆಹಲಿ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಕೆಲವೊಂದು ಪ್ರಾಂಚೈಸಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಡೆಲ್ಲಿ ಕ್ಯಾಪಿಟಲ್​ ತಂಡ ಕೂಡ ಇದರಿಂದ ಹೊರತಾಗಿಲ್ಲ.

ಏಪ್ರಿಲ್​ 9ರಿಂದ ಪ್ರಸಕ್ತ ಸಾಲಿನ ಲೀಗ್​ ಆರಂಭಗೊಳ್ಳಲಿರುವ ಕಾರಣ ಡೆಲ್ಲಿ ಕ್ಯಾಪಿಟಲ್​ ತಂಡ ಭಾರತೀಯ ಕ್ರಿಕೆಟ್ ಮಂಡಳಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದು, ತಮ್ಮ ತಂಡದ ಪ್ಲೇಯರ್ಸ್​ಗೆ ಕೋವಿಡ್​ ವ್ಯಾಕ್ಸಿನ್​ ನೀಡುವಂತೆ ತಿಳಿಸಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಜತೆ ಮಾತನಾಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಿದೆ ಅದು ಎಂದು ಡೆಲ್ಲಿ ಪ್ರಾಂಚೈಸಿ ತಿಳಿಸಿದೆ. ವಿಶೇಷವಾಗಿ ಈಗಾಗಲೇ ರಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಸ್ಪಾಟ್​​​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಪ್ಲೇಯರ್​ಗೆ ಪಾಕ್​ ಮಣೆ... ಕ್ಯಾಪ್ಟನ್​ ಬಾಬರ್​​ ಸಮರ್ಥನೆ ಹೀಗಿದೆ!

ವಿದೇಶಿ ಪ್ಲೇಯರ್ಸ್​​ ಕೊರೊನಾ ವ್ಯಾಕ್ಸಿನ್​ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ ಇದ್ದು, ಭಾರತದ ಪ್ಲೇಯರ್ಸ್​ಗೆ ಈ ಲಸಿಕೆ ನೀಡುವ ಸಾಧ್ಯತೆ ದಟ್ಟವಾಗಿದೆ. ಬರುವ ಮಂಗಳವಾರದಿಂದ ಬಯೋ ಬಬಲ್​​ಗೆ ಡೆಲ್ಲಿ ಪ್ಲೇಯರ್ಸ್​ ಒಳಗಾಗಲಿದ್ದಾರೆ. ಇದಾದ ಬಳಿಕ ಅವರನ್ನ ಕ್ವಾರಂಟೈನ್​​ ಮಾಡುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಕೋವಿಡ್​ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details