ಕರ್ನಾಟಕ

karnataka

ETV Bharat / sports

ಕೆಟ್ಟ ಶಬ್ದ ಬಳಸಿ ಬೈಬ್ಯಾಡ್ರಿ! ನಿಮ್ಗಾ ಕೈ ಮುಗೀತಿನ್ರಿ ಎಂದ ಪಾಕ್ ಕ್ರಿಕೆಟಿಗ​! - ಟ್ವೀಟರ್​ನಲ್ಲಿ ಮನವಿ

ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲಿನ ಬಳಿಕ ಸಿಕ್ಕಾಪಟ್ಟೆ ಟೀಕೆಗೊಳಗಾಗಿರುವ ಪಾಕ್​ ತಂಡ, ಕ್ರೀಡಾಭಿಮಾನಿಗಳು ಬಳಕೆ ಮಾಡುತ್ತಿರುವ ಕೆಟ್ಟ ಶಬ್ದಗಳ ಬೈಗುಳಗಳಿಂದ ರೋಸಿ ಹೋಗಿದೆ.

ಪಾಕಿಸ್ತಾನ ತಂಡ

By

Published : Jun 18, 2019, 9:28 PM IST

ಮ್ಯಾಂಚೆಸ್ಟರ್​​​:ಟೀಂ ಇಂಡಿಯಾ ವಿರುದ್ಧದ ಸೋಲಿನ ಬಳಿಕ ಪಾಕ್ ಕ್ರಿಕೆಟ್‌ ತಂಡ​ ಅತೀ ಹೆಚ್ಚು ಟೀಕೆಗೊಳಗಾಗಿದೆ. ಅಲ್ಲಿನ ಕ್ರೀಡಾಭಿಮಾನಿಗಳು ಸರ್ಫರಾಜ್​ ನೇತೃತ್ವದ ತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಪಾಕ್​ ಕ್ರೀಡಾಭಿಮಾನಿಗಳು ಬಳಕೆ ಮಾಡುತ್ತಿರುವ ಕೆಟ್ಟ ಪದಗಳಿಂದ ಕೂಡಿದ ಬೈಗುಳಗಳಿಂದ ಪಾಕ್​ ಬೌಲರ್​ ಮೊಹಮ್ಮದ್ ಅಮೀರ್ ರೋಸಿ ಹೋಗಿದ್ದಾರೆ. ಇದೇ ವಿಚಾರವಾಗಿ ಅಮೀರ್​ ಕ್ರೀಡಾಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದು, ದಯವಿಟ್ಟು ಕೆಟ್ಟ ಶಬ್ದ ಬಳಕೆ ಮಾಡಿ, ನಮಗೆ ಬೈಬೇಡಿ ಎಂದು ಟ್ವೀಟ್​ ಮಾಡಿದ್ದಾರೆ.

ನಮ್ಮ ಪ್ರದರ್ಶನ ವಿಮರ್ಶೆ ಮಾಡಿ, ನಿಮ್ಮ ಸಪೋರ್ಟ್​​ನಿಂದ ಖಂಡಿತವಾಗಿಯೂ ನಾವು ಮತ್ತೆ ಪುಟಿದೇಳುತ್ತೇವೆ ಎಂದು ಮನವಿ ಮಾಡಿದ್ದಾರೆ.

ಕಳೆದ ಭಾನುವಾರ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್​ ಅಮೀರ್​ ಉತ್ತಮವಾಗಿ ಬೌಲಿಂಗ್​ ಮಾಡಿ ಮೂರು ವಿಕೆಟ್​ ಕಬಳಿಸಿದ್ದರು. ಆದರೆ ಇತರೆ ಬೌಲರ್​ಗಳ ಕಳಪೆ ಪ್ರದರ್ಶನದ ಫಲವಾಗಿ ಭಾರತ 336 ರನ್ ​ಗಳಿಕೆ ಮಾಡಿತ್ತು. ಪಂದ್ಯದಲ್ಲಿ ಪಾಕ್​ 89 ರನ್​ಗಳ ಸೋಲು ಕಂಡಿತ್ತು.

ABOUT THE AUTHOR

...view details