ಕರ್ನಾಟಕ

karnataka

ETV Bharat / sports

ಓವರ್​ಗೆ 30 ರನ್​ ಕೊಟ್ಟು ಕಣ್ಣೀರಿಟ್ಟಿದ್ದೆ, ಅದೇ ಘಟನೆ ಟರ್ನಿಂಗ್ ಪಾಯಿಂಟ್ ಆಯಿತು: ಇಶಾಂತ್​ ಶರ್ಮಾ - ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ

2013ರಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಶಾಂತ್​ ನಿರ್ಣಾಯಕ ಹಂತದಲ್ಲಿ ಒಂದೇ ಓವರ್​ನಲ್ಲಿ ಬರೋಬ್ಬರಿ 30 ರನ್​ ಕೊಡುವ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದರು. ಆದರೆ ಆ ಪಂದ್ಯವೇ ತಮ್ಮ ಜೀವನದ ಟರ್ನಿಂಗ್​ ಪಾಯಿಂಟ್​ ಎಂದು ಹೇಳಿಕೊಂಡಿದ್ದಾರೆ.

ಇಶಾಂತ್​ ಶರ್ಮಾ
ಇಶಾಂತ್​ ಶರ್ಮಾ

By

Published : Aug 5, 2020, 4:56 PM IST

ನವದೆಹಲಿ: ಭಾರತ ಟೆಸ್ಟ್​ ತಂಡದ ಪ್ರಮುಖ ವೇಗದ ಬೌಲರ್​ ಆಗಿರುವ ಇಶಾಂತ್​ ಶರ್ಮಾ 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಜೇಮ್ಸ್​ ಫಾಕ್ನರ್​ ತಮ್ಮ ಒಂದೇ ಓವರ್​ನಲ್ಲಿ 30 ರನ್​ ಸಿಡಿಸಿದಾಗ ಅನುಭವಿಸಿದ ಯಾತನೆ ಮತ್ತು ಅದೇ ಘಟನೆ ಅವರ ವೃತ್ತಿ ಜೀವನದ ತಿರುವಾದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.​

ಕೇವಲ ಒಂದು ವರ್ಷ ರಣಜಿ ಕ್ರಿಕೆಟ್​ ಆಡಿ ರಾಷ್ಟ್ರೀಯ ತಂಡದಕ್ಕೆ ಪದಾರ್ಪಣೆ ಮಾಡಿದ್ದ ಇಶಾಂತ್​ ಆರಂಭದ ದಿನಗಳಲ್ಲಿ ಅದ್ಭುತ ಪ್ರದರ್ಶನ ತೋರಿದರೂ ನಂತರ ಅವರ ಬೌಲಿಂಗ್ ಮೊನಚು ಕಳೆದುಕೊಂಡಿತ್ತು. 2013ರಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಶಾಂತ್​ ನಿರ್ಣಾಯಕ ಅಂತದಲ್ಲಿ ಒಂದೇ ಓವರ್​ನಲ್ಲಿ ಬರೋಬ್ಬರಿ 30 ರನ್​ ಬಿಟ್ಟುಕೊಡುವ ಮೂಲಕ ಭಾರತದ ಸೋಲಿಗೆ ಕಾರಣವಾಗಿದ್ದರು. ಆದರೆ ಆ ಪಂದ್ಯವೇ ತಮ್ಮ ಜೀವನದ ಟರ್ನಿಂಗ್​ ಪಾಯಿಂಟ್​ ಎಂದು ಹೇಳಿಕೊಂಡಿದ್ದಾರೆ.

"ಅದು ಕಠಿಣ ಸಮಯವಾಗಿತ್ತು. ನನ್ನ ದೇಶಕ್ಕೆ ದ್ರೋಹ ಮಾಡಿದ್ದೇನೆ ಎಂದು ನಾನು ಭಾವಿಸಿದ್ದೆ. ಎರಡು-ಮೂರು ವಾರಗಳವರೆಗೆ ನಾನು ಯಾರೊಂದಿಗೂ ಮಾತನಾಡಲಿಲ್ಲ. ನಾನು ಬಹಳ ಕಾಲ ಅತ್ತಿದ್ದೆ, ನನ್ನ ಗೆಳತಿಗೆ ಕರೆ ಮಾಡಿ ಚಿಕ್ಕ ಮಗುವಿನ ರೀತಿ ಫೋನಿನಲ್ಲೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದೆ. ಊಟ ಮಾಡುವುದನ್ನ ನಿಲ್ಲಿಸಿದ್ದೆ, ನನಗೆ ನಿದ್ದೆ ಮಾಡಲಾಗುತ್ತಿರಲಿಲ್ಲ, ಯಾವುದೇ ವಿಚಾರದ ಬಗ್ಗೆ ಆಸಕ್ತಿ ವಹಿಸಲಾಗುತ್ತಿರಲಿಲ್ಲ. ಟವಿ ಆನ್​ ಮಾಡಿದರೆ ಜನರು ನನ್ನನ್ನು ಟೀಕಿಸುವುದೇ ಕಾಣುತ್ತಿತ್ತು. ಅದು ನನ್ನನ್ನು ಸಾಕಷ್ಟು ಕಾಡಿತ್ತು" ಎಂದು ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಆ ಘಟನೆಯೇ ನನ್ನ ಬದುಕಿಗೆ ಒಂದು ತಿರುವು ನೀಡಿತು. ನಿಮ್ಮ ಉತ್ಸಾಹವನ್ನು ಅರ್ಥಮಾಡಿಕೊಳ್ಳಲು ಇಂತಹ ಘಟನೆ ನಡೆಯಬೇಕಾಗುತ್ತದೆ. ಫಾಕ್ನರ್​ ಎಪಿಸೋಡ್​​ಗೆ ಮೊದಲು ನಾನು ಕೆಟ್ಟ ಪ್ರದರ್ಶನ ತೋರಿದಾಗ ಕೆಲವರು ನನ್ನ ಬಳಿ ಬಂದು ಇದೆಲ್ಲಾ ಸಾಮಾನ್ಯ ಎಂದು ಹೇಳಿದರೆ ಸುಮ್ಮನಾಗುತ್ತಿದೆ. ಆದರೆ 2013ರ ನಂತರ ನನ್ನ ಕಾರ್ಯಗಳಿಗೆ ನಾನು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ನೀವು ಯಾವಾಗ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸುತ್ತೀರೋ ಆಗ ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗಾಗಿ ಆಡುತ್ತೀರಿ ಎಂದು ಅವರು ತಮ್ಮ ಯಶಸ್ಸಿಗೆ ಕಾರಣವಾದ ಘಟನೆಯನ್ನು ಹೇಳಿದ್ದಾರೆ.

31 ವರ್ಷದ ಇಶಾಂತ್ ಶರ್ಮಾ ಭಾರತದ ಪರ 97 ಟೆಸ್ಟ್​ ಪಂದ್ಯಗಳಿಂದ 297 ವಿಕೆಟ್​ ಪಡೆದಿದ್ದಾರೆ. 80 ಏಕದಿನ ಪಂದ್ಯಗಳಿಂದ 115 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details