ಮುಂಬೈ:ಭಾರತ ಟೆಸ್ಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ಕ್ರಿಕೆಟ್ನ ಹಾಲಿ-ಮಾಜಿ ಕ್ರಿಕೆಟಿಗರ ಸಮೂಹ ಶುಭಕೋರಿದೆ.
ಭಾರತದ ಪರ 75 ಟೆಸ್ಟ್ ಪಂದ್ಯಗಳನ್ನಾಡಿರುವ ಚೇತೇಶ್ವರ್ ಪೂಜಾರ 5740 ರನ್ಗಳಿಸಿದ್ದಾರೆ. ಇವರು 18 ಶತಕ ಹಾಗೂ 3 ದ್ವಿಶಕ ಸಿಡಿಸಿ ಭಾರತ ತಂಡದಲ್ಲಿ ಖಾಯಂ ಟೆಸ್ಟ್ ಬ್ಯಾಟ್ಸ್ಮನ್ ಆಗಿದ್ದಾರೆ.
ಇಂದು ತಮ್ಮ 31ನೇ ಜನ್ಮದಿನವನ್ನಾಚರಿಸುತ್ತಿರುವ ಪೂಜಾರಗೆ "ತಂತ್ರಗಾರಿಕೆಯ ನಿಪುಣತೆ ಮತ್ತು ಕ್ಲಾಸ್ ಆಟಕ್ಕೆ ಸಾರಾಂಶವಾಗಿರುವ ಪೂಜಾರಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಬಿಬಿಸಿಐತನ್ನ ಅಧಿಕೃತ ಟ್ವಿಟರ್ನಲ್ಲಿ ಟ್ವೀಟ್ ಮಾಡಿಕೊಂಡಿದೆ.
ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್"ಈತನ ಕೌಂಟಿ ಕ್ರಿಕೆಟ್ ಜೊತೆಗಾರರು ಸ್ಟೆವ್ ಎಂದು, ಕೆಲವರು ಇವನನ್ನು ಪುಜ್ಜಿ ಕರೆದರೆ, ವಿಶ್ವದಾದ್ಯಂತ "ಚೆಫು" ಕರೆಯುತ್ತಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವಿನಲ್ಲಿ ನಿಮ್ಮ ಪಾತ್ರ ಎಂದಿಗೂ ಮೆರೆಯಲಾಗುವುದಿಲ್ಲ" ಎಂದು ತಮ್ಮದೇ ಆದ ದಾಟಿಯಲ್ಲಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, "ಪೂಜಾರರನ್ನು ಔಟ್ ಮಾಡಲು ಪೂಜಾರಿ ಆಶೀರ್ವಾದ ಅಗತ್ಯವಿದೆ! ಹುಟ್ಟು ಹಬ್ಬದ ಶುಭಾಶಯಗಳು ಪೂಜಾರ ಎಂದು ತಮಾಷೆಯಾಗಿ ಗುಜಾರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಹಾಲಿ ಕ್ರಿಕೆಟಿಗರಾದ ವೃಧ್ಧಿಮಾನ್ ಸಹಾ, ಕನ್ನಡಿಗ ಮಯಾಂಕ್ ಅಗರ್ವಾಲ್, ಕುಲ್ದೀಪ್ ಯಾದವ್, ಆಶ್ವಿನ್ ಕೂಡ ಪೂಜರಾಗೆ ಜನ್ಮದಿನದ ಶುಭಕೋರಿದ್ದಾರೆ.