ನವದೆಹಲಿ :ಅಡಿಲೇಡ್ ಓವಲ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಐದು ಬೌಲರ್ಗಳು, ಐದು ಬ್ಯಾಟ್ಸ್ಮನ್ಗಳು ಮತ್ತು ಓರ್ವ ವಿಕೆಟ್ ಕೀಪರ್ನೊಂದಿಗೆ ಕಣಕ್ಕಿಳಿಯಬೇಕು ಎಂದು ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.
ಭಾರತಕ್ಕೆ ಒಬ್ಬ ಉತ್ತಮ ಆಲ್ರೌಂಡರ್ ಅಗತ್ಯವಿರುವುದರಿಂದ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿರಬೇಕು ಎಂದು ಅಜರ್ ಅಭಿಪ್ರಾಯಪಟ್ಟಿದ್ದಾರೆ. ಆಡುವ ಹನ್ನೊಂದರಲ್ಲಿ ರಿಸ್ಟ್ ಸ್ಪಿನ್ನರ್ ಸೇರಿದಂತೆ ಇಬ್ಬರು ಸ್ಪಿನ್ನರ್ಗಳನ್ನು ಒಳಗೊಂಡಿರಬೇಕು ಎಂದಿರುವ ಅಜರ್, ಸ್ಲಿಪ್-ಫೀಲ್ಡಿಂಗ್ ಬಗ್ಗೆ ಕೊಂಚ ಜಾಗೃತರಾಗಿರಬೇಕು ಎಂದಿದ್ದಾರೆ.
"ಗುಲಾಬಿ ಚೆಂಡಿನಲ್ಲಿ ಸ್ಪಿನ್ ಬೌಲರ್ ವಿರುದ್ಧ ಆಡಲು ಕಷ್ಟಪಡುತ್ತಾರೆ. ಪಿಚ್ ಒಣಗಿದ್ದರೆ, ಚೆಂಡು ತಿರುಗುತ್ತದೆ, ಖಂಡಿತವಾಗಿಯೂ ನೀವು ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬೇಕು. ಆದರೆ, ಕೊಹ್ಲಿ ಇಬ್ಬರು ಸ್ಪಿನ್ನರ್ಗಳನ್ನು ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅನುಮಾನವಿದೆ" ಎಂದು ಅಜರುದ್ದೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.