ಕರ್ನಾಟಕ

karnataka

ETV Bharat / sports

ಧೋನಿ ಸ್ಥಾನಕ್ಕೆ ರಿಷಭ್ ಪಂತ್​ ಸೂಕ್ತ ವಿಕೆಟ್​ ಕೀಪರ್: ನೆಹ್ರಾ-ಬಂಗಾರ್​ ಅಭಿಮತ - ಐಪಿಎಲ್​ 2020

ಧೋನಿ ಆಗಸ್ಟ್​ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಸ್ಥಾನಕ್ಕೆ ಮೊದಲ ಆಯ್ಕೆ ರಿಷಭ್ ಪಂತ್ ಎಂದೇ ಕೆಲವು ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿಯುತ್ತಿದ್ದಾರೆ.

ಎಂಎಸ್​ ಧೋನಿ ಸ್ಥಾನಕ್ಕೆ ರಿಷಭ್ ಪಂತ್​
ಎಂಎಸ್​ ಧೋನಿ ಸ್ಥಾನಕ್ಕೆ ರಿಷಭ್ ಪಂತ್​

By

Published : Oct 6, 2020, 4:44 PM IST

ಮುಂಬೈ: ಭಾರತೀಯ ಕ್ರಿಕೆಟ್‌ ಕಂಡಿರುವ ಶ್ರೇಷ್ಠ ವಿಕೆಟ್ ಕೀಪರ್​, ಬ್ಯಾಟ್ಸ್​ಮನ್ ಆಗಿರುವ ಎಂ.ಎಸ್.ಧೋನಿ ಸ್ಥಾನಕ್ಕೆ ಈಗಾಗಲೇ ಕೆ.ಎಲ್‌.ರಾಹುಲ್, ಸಂಜು ಸಾಮ್ಸನ್​ ಹಾಗೂ ರಿಷಭ್ ಪಂತ್ ನಡುವೆ ಪೈಪೋಟಿ ಶುರುವಾಗಿದೆ. ಆದರೆ ಮಾಜಿ ಕ್ರಿಕೆಟಿಗರಾದ ಆಶಿಷ್ ನೆಹ್ರಾ ಹಾಗೂ ಸಂಜಯ್ ಬಂಗಾರ್​ ಧೋನಿ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಸೂಕ್ತವಾದ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಆಗಸ್ಟ್​ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ. ಇದೀಗ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಸ್ಥಾನಕ್ಕೆ ಮೊದಲ ಆಯ್ಕೆ ರಿಷಭ್ ಪಂತ್ ಎಂದೇ ಕೆಲವು ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿಯುತ್ತಿದ್ದಾರೆ. ಆದರೆ ಪಂತ್‌ ಅವರನ್ನು ಕೈಬಿಟ್ಟ ತಂಡ ರಾಹುಲ್ ಅವ​ರೊಂದಿಗೆ ಕಳೆದ ನ್ಯೂಜಿಲ್ಯಾಂಡ್​ ಸರಣಿಯನ್ನಾಡಿತ್ತು. ಟೆಸ್ಟ್​ ಕ್ರಿಕೆಟ್​ನಲ್ಲಿ ವೃದ್ಧಿಮಾನ್ ಸಹಾ ಅದ್ಭುತ ವಿಕೆಟ್​ ಕೀಪರ್​ ಆಗಿರುವುದರಿಂದ ಅಲ್ಲಿ ಪಂತ್​ಗೆ ಅವಕಾಶ ಕಡಿಮೆ ಇದೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಪಂತ್​ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ರನ್​ಗಳಿಕೆಯಲ್ಲೂ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಕಾರಣದಿಂದ ಭಾರತದ ಮಾಜಿ ಬ್ಯಾಟಿಂಗ್ ಕೋಚ್​ ಬಂಗಾರ್​ ಹಾಗೂ ಮಾಜಿ ಬೌಲರ್​ ನೆಹ್ರಾ, ಪಂತ್ ಪರ ಬ್ಯಾಟಿಂಗ್ ಮಾಡಿದ್ದಾರೆ.

"ವಿಕೆಟ್ ಕೀಪಿಂಗ್ ವಿಷಯಕ್ಕೆ ಬಂದರೆ ನಾನು ರಿಷಭ್ ಪಂತ್ ಭಾರತ ತಂಡದ ಭಾಗವಾಗಬೇಕೆಂದು ಭಾವಿಸುತ್ತೇನೆ. ಅವರು ಈ ವರ್ಷದ ಐಪಿಎಲ್​ ಅನ್ನು ಪ್ರಾರಂಭಿಸಿದ ರೀತಿ ಮತ್ತು ತಂಡಕ್ಕೆ ಎಡಗೈ ಆಟಗಾರನ ಅಗತ್ಯತೆಯನ್ನು ಪರಿಗಣಿಸಬೇಕಾಗಿರುವುದರಿಂದ ಪಂತ್ ಆಯ್ಕೆ ಮಹತ್ವದ್ದಾಗಿದೆ. ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕ ಮತ್ತು ಟೀಮ್ ಇಂಡಿಯಾದಲ್ಲಿ ಬಲಗೈ ಆಟಗಾರರನ್ನು ಸಮತೋಲನಗೊಳಿಸಲು ಪಂತ್ ಖಂಡಿತ ಬಹುಮುಖ್ಯ ಆಯ್ಕೆ" ಎಂದು ಸ್ಟಾರ್​ ಸ್ಪೋರ್ಟ್ಸ್​ನ ಕ್ರಿಕೆಟ್​ ಕನೆಕ್ಟೆಡ್​ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಬಂಗಾರ್ ಮಾತನ್ನು ಒಪ್ಪಿಕೊಂಡಿರುವ ನೆಹ್ರಾ ಕೂಡ, ಯಾವ ಮಾದರಿಯಲ್ಲಿ ಆಡುತ್ತೇವೆ ಎಂಬುದರ ಮೇಲೆ ಇದೆಲ್ಲವೂ ಅವಲಂಬನೆಯಾಗುತ್ತದೆ ಎಂದಿದ್ದಾರೆ.

"ನಾವು ಟೆಸ್ಟ್‌ ಕ್ರಿಕೆಟ್‌ ಅನ್ನು ತೆಗೆದುಕೊಂಡರೆ, ನೀವು ಉತ್ತಮ ವಿಕೆಟ್ ಕೀಪರ್ ಜೊತೆ ಹೋಗಲು ಬಯಸಿದ್ದೇ ಆದಲ್ಲಿ, ನಾಯಕ ಮತ್ತು ತರಬೇತುದಾರನ ಮನಸ್ಥಿತಿಯನ್ನು ಸಹ ಪರಿಗಣಿಸಬೇಕಾಗುತ್ತದೆ. ಸಂಜಯ್‌ ಬಾಂಗರ್‌ ಅವರ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಅವರು(ಭಾರತ ತಂಡ) ರಿಷಭ್ ಪಂತ್ ಅವರೊಂದಿಗೆ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಪಂತ್​ಗೆ ಬೆಂಬಲದ ಅಗತ್ಯವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭದಲ್ಲಿ ಪ್ರತಿಯೊಬ್ಬ ಆಟಗಾರನನ್ನು ಬೆಂಬಲಿಸಬೇಕು" ಎಂದು ಹೇಳಿದ್ದಾರೆ.

ಪಂತ್​ ಭಾರತದ ಪರ 13 ಟೆಸ್ಟ್‌, 16 ಏಕದಿನ ಪಂದ್ಯ ಹಾಗೂ 28 ಟಿ20 ಪಂದ್ಯಗಳನ್ನಾಡಿದ್ದಾರೆ.

ABOUT THE AUTHOR

...view details