ಕರ್ನಾಟಕ

karnataka

ETV Bharat / sports

ವಿಶ್ವಕಪ್​ನಿಂದ ಹೊರಬಿದ್ದ ಸ್ಫೋಟಕ ಆಟಗಾರ​... ಗಾಯದ ಮೇಲೆ ಬರೆ ಎಳೆದಂತಾದ ವಿಂಡೀಸ್​ ಸ್ಥಿತಿ! - ವಿಂಡೀಸ್​

ಮಂಡಿ ನೋವಿನಿಂದ ಬಳಲುತ್ತಿದ್ದ ವಿಂಡೀಸ್​ ಸ್ಟಾರ್​ ಆಲ್​ರೌಂಡರ್​ ಆಂಡ್ರ್ಯೂ ರಸೆಲ್​ ಗಾಯದಿಂದ ಚೇತರಿಕೆ ಕಾಣದ ಹಿನ್ನಲೆಯಲ್ಲಿ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ.

Andre Russell

By

Published : Jun 24, 2019, 8:34 PM IST

ಮುಂಬೈ:ಐಪಿಎಲ್​ನಲ್ಲಿ ಮಿಂಚಿದ್ದ ವೆಸ್ಟ್​ ಇಂಡೀಸ್​ ತಂಡದ ಸ್ಫೋಟಕ ಆಲ್​ರೌಂಡರ್​ ಆ್ಯಂಡ್ರ್ಯೂ ರಸೆಲ್ 2019 ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ.​

ಮಂಡಿ ನೋವಿನಿಂದ ಬಳಲುತ್ತಿದ್ದ ರಸೆಲ್​ ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಗುಣಮುಖರಾಗದ ಹಿನ್ನಲೆಯಲ್ಲಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಕೊನೆಯ ಮೂರು ಪಂದ್ಯಗಳಲ್ಲಾದರೂ ಗೆದ್ದು ವಿಶ್ವಕಪ್​ನಲ್ಲಿ ಗೆಲುವಿನ ವಿದಾಯ ಹೇಳಬೇಕೆಂದುಕೊಂಡಿದ್ದ ವಿಂಡೀಸ್​ ತಂಡಕ್ಕೆ ಭಾರಿ ಆಘಾತವುಂಟಾಗಿದೆ.

ಐಪಿಎಲ್​ನಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಮಿಂಚಿದ್ದ 510 ರನ್​ ಹಾಗೂ 14 ವಿಕೆಟ್​ ಪಡೆದು ಮಿಂಚಿದ್ದರು. ವಿಶ್ವಕಪ್​ನಲ್ಲೂ ತಮ್ಮ ಪ್ರದರ್ಶನ ಮುಂದುವರಿಸುವ ಮುನ್ಸೂಚನೆಯೊಂದಿಗೆ ಮೊದಲ ಪಂದ್ಯಕ್ಕಿಳಿದಿದ್ದ ರಸೆಲ್​ ಪಾಕಿಸ್ತಾನದ ವಿರುದ್ಧ 3 ಓವರ್​ಗಳಲ್ಲಿ 4 ರನ್​ ನೀಡಿ 2 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆದರೆ ಅವರ ಪ್ರದರ್ಶನ ಅದೊಂದೇ ಪಂದ್ಯಕ್ಕೆ ಸೀಮಿತವಾಗಿತ್ತು. ಈ ಟೂರ್ನಿಯಲ್ಲಿ 3 ಪಂದ್ಯಗಳಿಂದ 36 ರನ್​ ಗಳಿಸಿದ್ದು 5 ವಿಕೆಟ್​ ಪಡೆದಿದ್ದರು.

ರಸೆಲ್​ ಬದಲಿಗೆ ಐರ್ಲೆಂಡ್​ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಸುನಿಲ್​ ಆ್ಯಂಬ್ರಿಸ್​ ವೆಸ್ಟ್​ ಇಂಡೀಸ್​ ತಂಡದ 15 ಸದಸ್ಯರ ತಂಡ ಸೇರಿಕೊಂಡಿದ್ದಾರೆ. ಆಂಬ್ರಿಸ್​ ವಿಂಡೀಸ್​ ಪರ ಕೇವಲ 7 ಪಂದ್ಯಗಳನ್ನಾಡಿದ್ದಾರೆ.

ABOUT THE AUTHOR

...view details