ಹೈದರಾಬಾದ್:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದೆ. ಆದರೆ, ತಂಡದ ಉಪನಾಯಕ ಅಜಿಂಕ್ಯ ರಹಾನೆಗೆ ಡಬಲ್ ಧಮಾಕಾ ಸಿಕ್ಕಿದ್ದು, ಪಂದ್ಯದ ನಾಲ್ಕನೇ ದಿನ ಅಪ್ಪನಾದ ಸಂತೋಷದಲ್ಲಿ ಅವರು ತೇಲಾಡಿದ್ದರು.
ಧೋನಿ,ರೈನಾ,ರೋಹಿತ್ ಸಾಲಿಗೆ ರಹಾನೆ.. ಅಜಿಂಕ್ಯಾ ಕುಟುಂಬಕ್ಕೆ ಎಂಟ್ರಿಕೊಟ್ಳು ಮಹಾಲಕ್ಷ್ಮಿ..
ರಹಾನೆ ಪತ್ನಿ ಶನಿವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಅವರು ಮಗುವಿನ ಮುಖ ನೋಡಿ ಖುಷಿ ಪಟ್ಟಿದ್ದಾರೆ. ಇದೇ ವಿಷಯವನ್ನ ತಮ್ಮ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. 2014ರಲ್ಲಿ ಬಹುಕಾಲದ ಗೆಳತಿ ರಾಧಿಕಾ ಜೊತೆ ಮದುವೆಯಾಗಿರುವ ರಹಾನೆ, ಇದೀಗ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಕ್ಟೋಬರ್ 10ರಿಂದ ಪುಣೆಯಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿರುವ ಕಾರಣ, ರಹಾನೆ ಆದಷ್ಟು ಬೇಗ ತಂಡವನ್ನ ಸೇರಿಕೊಳ್ಳಬೇಕಾಗಿದ್ದು, ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಿಲ್ಲ.
ರಹಾನೆ ಅಪ್ಪನಾಗುತ್ತಿದ್ದಂತೆ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ಶುಭಕೋರಿದ್ದು, ಅಮ್ಮ ಹಾಗೂ ಮಗು ರಾಜಕುಮಾರಿ ಆರೋಗ್ಯವಾಗಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಹಾನೆ ಹೆಣ್ಣು ಮಗುವಿನ ತಂದೆಯಾಗುವ ಮೂಲಕ ತಂಡದ ಸಹ ಅಟಗಾರರಾದ ಧೋನಿ, ರೈನಾ, ಭಜ್ಜಿ, ರೋಹಿತ್ ಹಾಗೂ ವಿಹಾರಿ ಸಾಲಿಗೆ ಸೇರಿಕೊಂಡಿದ್ದಾರೆ.