ಕರ್ನಾಟಕ

karnataka

ETV Bharat / sports

ಚಿಕಿತ್ಸೆ ಫಲಿಸದೇ ಅಂತಾರಾಷ್ಟ್ರೀಯ ಕ್ರಿಕೆಟಿಗ​ ಸಾವು.. ಅಪ್ಘಾನಿಸ್ತಾನ ಆರಂಭಿಕ ಆಟಗಾರ​ ಇನ್ನಿಲ್ಲ!

ರಸ್ತೆ ಅಪಘಾತದಲ್ಲಿ ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ​ ಆಟಗಾರ ಸಾವನ್ನಪ್ಪಿದ್ದು, ಅಪ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

By

Published : Oct 6, 2020, 12:31 PM IST

Afghanistan opener Najeeb Tarakai passes away, Afghanistan opener Najeeb Tarakai passes away news, Afghanistan opener Najeeb Tarakai news, road accident, najeeb road accident, najeeb road accident news, ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಓಪನರ್ ಸಾವು, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ ಸಾವು, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ ಸಾವು ಸುದ್ದಿ, ಅಪ್ಘಾನಿಸ್ತಾನ ಓಪನರ್ ನಜೀಬ್​ ತರಾಕೈ, ನಜೀಬ್​ ತರಾಕೈ ಸುದ್ದಿ, ನಜೀಬ್​ ತರಾಕೈ ರಸ್ತೆ ಅಪಘಾದಲ್ಲಿ ಸಾವು, ನಜೀಬ್​ ತರಾಕೈ ರಸ್ತೆ ಅಪಘಾತದಲ್ಲಿ ಸಾವು ಸುದ್ದಿ,
ಕೃಪೆ: Twitter/ Afghanistan Cricket Board

ಪೂರ್ವ ನಂಗರ್ಹಾರ್:ರಸ್ತೆ ಅಪಘಾತದಲ್ಲಿ ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ಸಾವನ್ನಪ್ಪಿದ್ದು, ಕ್ರಿಕೆಟ್​ ಜಗತ್ತು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಅಪ್ಘಾನಿಸ್ತಾನ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ನಜೀಬ್​ ಕಿರಿಯ ವಯಸ್ಸಿನಲ್ಲೇ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಾರ್ಕೆಟ್​ಟ್​ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ನಜೀಬ್​ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ನಜೀಬ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಜೀಬ್​ ಇಂದು ​ ಕೊನೆಯುಸಿರೆಳೆದಿದ್ದಾರೆ.

ನಜೀಬ್​ 2014ರಲ್ಲಿ ಜಿಂಬಾಬ್ವೆ ಮೇಲೆ ತಮ್ಮ ಫಸ್ಟ್​ ಕ್ಲಾಸ್​ ಕ್ರಿಕೆಟ್​ ಪಂದ್ಯ ಆಡಿದ್ದರು. 24 ಪಂದ್ಯಗಳಲ್ಲಿ 47.2 ಸರಾಸರಿ ರನ್​ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಡಬಲ್​ ಸೆಂಚೂರಿಯನ್ನು ಬಾರಿಸಿದ್ದರು. ಅಪ್ಘಾನಿಸ್ತಾನ ಪರ 12 ಟಿ-20 ಮತ್ತು ಒಂದು ಏಕದಿನ ಪಂದ್ಯಗಳನ್ನಾಡಿದ್ದಾರೆ​. 2017ರಲ್ಲಿ ಐರ್ಲ್ಯಾಂಡ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ನಜೀಬ್​ 90 ರನ್ ​ಗಳಿಸುವ ಮೂಲಕ ಮಿಂಚಿದ್ದರು.

ABOUT THE AUTHOR

...view details