ಸಿಡ್ನಿ:ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯಂಗ್ ಪ್ಲೇಯರ್ ಶುಬ್ಮನ್ ಗಿಲ್ ಅರ್ಧಶತಕಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಪನಾಯಕ ರೋಹಿತ್ ಶರ್ಮಾ ಜತೆ ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ 101 ಎಸೆತಗಳಲ್ಲಿ 50 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದು, ಇದರಲ್ಲಿ 8 ಬೌಂಡರಿಗಳು ಸೇರಿವೆ. 21 ವರ್ಷದ ಗಿಲ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮೂರನೇ ಇನ್ನಿಂಗ್ಸ್ನಲ್ಲೇ ಅರ್ಧಶತಕ ಸಿಡಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್, 'A star has arrived' ಗಿಲ್ ಅದ್ಭುತವಾಗಿ ಆರಂಭಿಸಿದ್ದಾನೆ. ಮೈದಾನದಲ್ಲಿದ್ದ ವೇಳೆ ಚೆನ್ನಾಗಿ ಬ್ಯಾಟ್ ಬೀಸಿದ್ದೀರಿ. ಔಟ್ ಆಗಿದ್ದಕ್ಕೆ ನಿರಾಸೆ ಬೇಡ ಎಂದು ಹೇಳಿದ್ದಾರೆ.
ಕೇವಲ 2ನೇ ಟೆಸ್ಟ್ ಮ್ಯಾಚ್ನಲ್ಲೇ ಶುಬ್ಮನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಗಿಲ್ 45 ಹಾಗೂ ಅಜೇಯ 35 ರನ್ಗಳಿಕೆ ಮಾಡಿದ್ದರು.