ಕರ್ನಾಟಕ

karnataka

ETV Bharat / sports

ಹೆಲಿಕಾಪ್ಟರ್​ ಶಾಟ್​ ಮೂಲಕ ಕ್ರಿಕೆಟ್​ ದಿಗ್ಗಜರಿಂದ ಶಹಬ್ಬಾಸ್​​​ ಗಿರಿ ಪಡೆದ 7ರ ಬಾಲೆ...!

ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ಅವರು ಪಾರಿ ಶರ್ಮಾ ಎಂಬ ಪುಟ್ಟ ಬಾಲಕಿ ಹೆಲಕಾಪ್ಟರ್​ ಶಾಟ್​ ಬಾರಿಸುವ 18 ಸೆಕೆಂಡ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್​ ಮಾಡಿದ್ದರು. ಆ ವಿಡಿಯೋಗೆ ತಮ್ಮ ಕಾಮೆಂಟರಿಯನ್ನು ಸೇರಿಸಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಈ 18 ಸೆಕೆಂಡ್​ನಲ್ಲಿ ಪರಿ ಶರ್ಮಾ ಅದ್ಭುತವಾಗಿ ಹಲವಾರು ಬಾರಿ ಯಶಸ್ವಿಯಾಗಿ ಹೆಲಿಕಾಪ್ಟರ್​ ಶಾಟ್​ ಬಾರಿಸಿದ್ದಾಳೆ.

ಪಾರಿ ಶರ್ಮಾ ಹೆಲಿಕಾಪ್ಟರ್​ ಶಾಟ್​
ಪಾರಿ ಶರ್ಮಾ ಹೆಲಿಕಾಪ್ಟರ್​ ಶಾಟ್​

By

Published : Aug 13, 2020, 4:30 PM IST

Updated : Aug 13, 2020, 5:00 PM IST

ನವದೆಹಲಿ:2020ರ ಐಪಿಎಲ್​ನಲ್ಲಿ ಎಂ ಎಸ್​ ಧೋನಿ ಹೆಲಿಕಾಪ್ಟರ್​ ಶಾಟ್​ ಬಾರಿಸುವುದನ್ನು ವೀಕ್ಷಿಸಲು ಇಡೀ ಕ್ರಿಕೆಟ್​ ಜಗತ್ತು ಕಾದು ಕುಳಿತಿದೆ. ಅದಕ್ಕೂ ಮೊದಲು 7 ವರ್ಷದ ಬಾಲಕಿಯೊಬ್ಬಳು ಧೋನಿ ಹೆಲಿಕಾಪ್ಟರ್​ ಶಾಟ್​ ಅನುಕರಣೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ಅವರು ಪರಿ ಶರ್ಮಾ ಎಂಬ ಪುಟ್ಟ ಬಾಲಕಿ ಹೆಲಕಾಪ್ಟರ್​ ಶಾಟ್​ ಬಾರಿಸುವ 18 ಸೆಕೆಂಡ್ ವಿಡಿಯೋವನ್ನು ತಮ್ಮ ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದರು. ಆ ವಿಡಿಯೋಗೆ ತಮ್ಮ ಕಾಮೆಂಟರಿಯನ್ನು ಸೇರಿಸಿ ಪೋಸ್ಟ್​ ಮಾಡಿದ್ದಾರೆ. ಈ 18 ಸೆಕೆಂಡ್​ನಲ್ಲಿ ಪರಿ ಶರ್ಮಾ ಅದ್ಭುತವಾಗಿ ಹಲವಾರು ಬಾರಿ ಯಶಸ್ವಿಯಾಗಿ ಹೆಲಿಕಾಪ್ಟರ್​ ಶಾಟ್​ ಬಾರಿಸಿದ್ದಾಳೆ.

ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಂಜಯ್​ ಮಂಜ್ರೇಕರ್​, ಹೆಲಿಕಾಪ್ಟರ್​ ಶಾಟ್​ ಅನ್ನು ಅಭ್ಯಾಸ ಮಾಡುವುದನ್ನು ನಾನು ಈಗ ನೋಡುತ್ತಿದ್ದೇನೆ. ವಿಕೆಟ್​ ಹಿಂದೆ ತುಂಬಾ ಹತ್ತಿರ ನಿಂತು ಚೆಂಡನ್ನು ಪಡೆಯುವ ಜೊತೆಗೆ, ಧೋನಿ ಉದಯೋನ್ಮುಖ ಕ್ರಿಕೆಟಿಗರಿಗೆ ಒಂದು ಉತ್ತಮ ಹೊಡೆತವನ್ನು ಆಯ್ಕೆಯಾಗಿ ಜನಪ್ರಿಯಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹರಿಯಾಣದ ರೋಹ್ಟಕ್​ನ ಏಳು ವರ್ಷ ಬಾಲಕಿ ಪರಿ ಶರ್ಮಾ ಭವಿಷ್ಯದಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಲು ಮತ್ತು ಎಲ್ಲಾ ಬ್ಯಾಟಿಂಗ್​ ದಾಖಲೆಗಳನ್ನು ಮುರಿಯುವ ಆಸೆಯನ್ನು ಹೊಂದಿದ್ದಾಳೆ. ಭಾರತದ ಮಾಜಿ ಕ್ರಿಕೆಟಿಗರಾದ ಅಜಯ್​ ರಾತ್ರ ಮತ್ತು ಜೋಗಿಂದರ್​ ಶರ್ಮಾ ಅವರೊಂದಿಗೆ ಆಡಿದ್ದ ಪರಿ ತಂದೆಯೇ ಅವಳಿಗೆ ಕೋಚ್​ ಆಗಿದ್ದಾರೆ.

ಪರಿ ಹೆಲಿಕಾಪ್ಟರ್​ ವಿಡಿಯೋ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ವೈರಲ್​ ಆಗಿತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸಿರ್ ಹುಸೇನ್​ ಕೂಡ, ಈ ವಿಡಿಯೋ ಹಲವು ಕಾರಣಗಳಿಂದ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದರು. ಇವರಲ್ಲದೆ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗರಾದ ಮೈಕಲ್​ ವಾನ್​, ಮೈಕ್ ಆಥರ್ಟನ್​ ಕೂಡ ಪರಿ ಶರ್ಮಾಳ ಬ್ಯಾಟಿಂಗ್​ ಕೌಶಲಕ್ಕೆ ತಲೆದೂಗಿದ್ದಾರೆ.​

Last Updated : Aug 13, 2020, 5:00 PM IST

ABOUT THE AUTHOR

...view details