ಅಹಮದಾಬಾದ್ (ಗುಜರಾತ್): ನ್ಯೂಜಿಲೆಂಡ್ ಆಲ್ ರೌಂಡರ್ ರಾಚಿನ್ ರವೀಂದ್ರ ಐಸಿಸಿ ವಿಶ್ವಕಪ್ 2023 ರ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ರವೀಂದ್ರ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಇದು ಅವರ ವಿಶ್ವಕಪ್ ವೃತ್ತಿಜೀವನದ ಮೊದಲ ಪಂದ್ಯವಾಗಿದೆ. ರಾಚಿನ್ ಅವರ ಒಡಿಐ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಅಜೇಯರಾಗಿ 123 ರನ್‌ಗಳ ಗಳಿಸಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಡೆವೊನ್ ಕಾನ್ವೆ ಅವರೊಂದಿಗೆ ನ್ಯೂಜಿಲೆಂಡ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ ತಂದು ಕೊಟ್ಟಿದ್ದಾರೆ.
ರಾಚಿನ್ ರವೀಂದ್ರಗೆ ಆ ಹೆಸರು ಬಂದಿದ್ದು ಹೇಗೆ?:ರಾಚಿನ್ ರವೀಂದ್ರ ಎಂದು ಹೆಸರಿಡುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ವಾಸ್ತವವಾಗಿ, ಅವರ ತಂದೆ ಅವರು, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ.. ಈ ಕಾರಣದಿಂದಲೇ ಇಬ್ಬರ ಗುಣಗಳನ್ನು ರವೀಂದ್ರ ಹೊಂದಿರಬೇಕು ಎಂದು ಬಯಸಿದ್ದರು. ಇದರಿಂದ ಅವರು ಆತನಿಗೆ ರಾಚಿನ್ ಎಂದು ಹೆಸರು ಇಟ್ಟಿದ್ದಾರೆ. ರಾಚಿನ್ ಭಾರತೀಯ ಮೂಲದ ಕಿವೀಸ್ನ ಆಟಗಾರ. ಅದರಲ್ಲೂ ರಾಚಿನ್ ರವೀಂದ್ರ ಅವರ ತಂದೆ ಬೆಂಗಳೂರಿನವರು.
ಎಡಗೈ ಆಟಗಾರರಾಗಿರುವ ಇವರು ವೆಲ್ಲಿಂಗ್ಟನ್‌ನಲ್ಲಿ ಹುಟ್ಟಿ ಬೆಳೆದ್ದಾರೆ. ಅವರ ಪೋಷಕರು ಕರ್ನಾಟಕದ ಬೆಂಗಳೂರಿನ ನಿವಾಸಿಗಳು ಮತ್ತು ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ರಾಚಿನ್ ಅವರ ಪೋಷಕರು ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡರು. ರಾಚಿನ್ ಅವರ ಪೋಷಕರು ನ್ಯೂಜಿಲೆಂಡ್‌ಗೆ ತೆರಳುವ ಮೊದಲು ಅವರ ತವರೂರು ಬೆಂಗಳೂರಿನಲ್ಲಿ ಕ್ಲಬ್ ಮಟ್ಟದ ಕ್ರಿಕೆಟ್ ಕೂಡಾ ಆಡಿದ್ದರು.