ಲಂಡನ್: ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೋವ್ ಸೇರಿದಂತೆ ಪ್ರಸ್ತುತ ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗಿದ್ದ 11 ಇಂಗ್ಲೆಂಡ್ ಆಟಗಾರರಲ್ಲಿ ಎಂಟು ಮಂದಿ ಬುಧವಾರ ತವರಿಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಬಯೋಬಬಲ್ನಲ್ಲಿ ಭಾರತೀಯ ಕ್ರಿಕೆಟಿಗರಿಗೆ ಕೊರೊನಾ ಕಾಣಿಸಿದ್ದರಿಂದ ಅನಿವಾರ್ಯವಾಗಿ ಟೂರ್ನಿಯನ್ನು ಬಿಸಿಸಿಐ ಮಂಗಳವಾರ ತಾತ್ಕಾಲಿಕವಾಗಿ ರದ್ದು ಮಾಡಿದೆ.
ಔಟ್ಲೆಟ್ ಮಾಧ್ಯಮದ ಪ್ರಕಾರ ಸ್ಯಾಮ್ ಕರ್ರನ್, ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್‌ವೋಕ್ಸ್, ಮೊಯೀನ್ ಅಲಿ ಮತ್ತು ಜೇಸನ್ ರಾಯ್ ಕೂಡ ಇಂಗ್ಲೆಂಡ್ಗೆ ಮರಳಿದ್ದಾರೆ.
ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಡೇವಿಡ್ ಮಲನ್ ಮತ್ತು ಕ್ರಿಸ್ ಜೋರ್ಡನ್ ಮುಂದಿನ 48 ಗಂಟೆಗಳಲ್ಲಿ ಮರಳುವ ನಿರೀಕ್ಷೆಯಿದೆ.