ಮುಂಬೈ: ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದಿದೆ. ಟೀಂ ಇಂಡಿಯಾ 372 ರನ್‌ಗಳ ದೊಡ್ಡ ಅಂತರದಿಂದ ಗೆದ್ದು ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ಗೆ ಪ್ಲೇಯರ್ ಆಫ್ದ ಮ್ಯಾಚ್, ರವಿಚಂದ್ರನ್ ಅಶ್ವಿನ್ಗೆ ಪ್ಲೇಯರ್ ಆಫ್ ದ ಸಿರೀಸ್ ನೀಡಿ ಗೌರವಿಸಲಾಗಿದೆ.
ಬಿಸಿಸಿಐ ಸೋಮವಾರ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ. ಅಕ್ಷರ್ ಪಟೇಲ್, ಅಜಾಜ್ ಪಟೇಲ್, ರಚಿನ್ ರವೀಂದ್ರ ಮತ್ತು ರವೀಂದ್ರ ಜಡೇಜಾ ಅವರು ಸಾಲಾಗಿ ನಿಂತಿರುವ ಫೋಟೋ ಇದಾಗಿದ್ದು, ಆದರೂ ವಿಶೇಷವಾಗಿದೆ.