ಕರ್ನಾಟಕ

karnataka

ETV Bharat / sports

IND vs BAN 1st Test: ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ; ಮುಗ್ಗರಿಸಿದ ಬಾಂಗ್ಲಾ - ಬಾಂಗ್ಲಾದೇಶಕ್ಕೆ ಹಿನ್ನಡೆ

ಭಾರತ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಕೇವಲ 133 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿದೆ.

bangladesh-vs-india-1st-test-bangla-trail-by-271-runs
Bangladesh vs India, 1st Test: ಎರಡನೇ ದಿನದಾಟ ಅಂತ್ಯಕ್ಕೆ ಬಾಂಗ್ಲಾಗೆ 271 ರನ್​ಗಳ ಹಿನ್ನಡೆ

By

Published : Dec 15, 2022, 4:55 PM IST

Updated : Dec 15, 2022, 5:40 PM IST

ಚಿತ್ತಗಾಂಗ್​(ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ಇಂದು ಎರಡನೇ ದಿನದಾಟದಲ್ಲಿ 404 ರನ್​ಗಳಿಗೆ ಟೀಂ ಇಂಡಿಯಾ ಆಲೌಟಾಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ದಿನದಂತ್ಯಕ್ಕೆ 133 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡು 271 ರನ್​ಗಳ ಹಿನ್ನಡೆ ಅನುಭವಿಸಿದೆ. ಬಾಂಗ್ಲಾ ಬ್ಯಾಟರ್‌ಗಳನ್ನು ಕುಲ್ದೀಪ್ ಯಾದವ್‌ ಹಾಗು ಮಹಮ್ಮದ್‌ ಸಿರಾಜ್‌ ಇನ್ನಿಲ್ಲದಂತೆ ಕಾಡಿದರು.

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್​ ಕಳೆದುಕೊಂಡು 278 ರನ್​ಗಳನ್ನು ಕಲೆ ಹಾಕಿತ್ತು. ಇಂದು ಎರಡನೇ ದಿನದಾಟ ಶುರು ಮಾಡಿದ ಟೀಂ ಇಂಡಿಯಾ ಆಟಗಾರರು 126 ರನ್​ಗಳನ್ನು ಸೇರಿಸಿ ತಂಡದ ಮೊತ್ತವನ್ನು 404ಕ್ಕೆ ಹೆಚ್ಚಿಸಿದರು. ತಮ್ಮ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ಆಟಗಾರರು ಆರಂಭದಿಂದಲೇ ಮುಗ್ಗರಿಸಿದರು.

ಇನ್ನಿಂಗ್ಸ್​ನ ಮೊದಲ ಎಸತದಲ್ಲೇ ನಜ್ಮುಲ್ ಹೊಸೈನ್ ಶಂಟೋ ಅವರಿಗೆ ಮೊಹಮ್ಮದ್ ಸಿರಾಜ್​ ಪೆವಿಲಿಯನ್​ ದಾರಿ ತೋರಿಸಿ ಶಾಕ್ ಕೊಟ್ಟರು. ನಂತರ ಬಂದ ಯಾಸಿರ್​ ಅಲಿ ಕೂಡ 4 ರನ್​ಗಳಿಗೆ ಉಮೇಶ್​ ಯಾದವ್​ ಎಸೆತದಲ್ಲಿ ಬೌಲ್ಡ್​ ಆದರು. ಇದರ ಬಳಿಕ ಜೊತೆಯಾದ ಲಿಟ್ಟನ್​ ದಾಸ್​ ಮತ್ತು ಜಾಕೀರ್​ ಹಸನ್​ 34 ರನ್​ಗಳ ಜೊತೆಯಾಟ ನೀಡಿದರು. ಆದರೆ, ತಂಡದ ಮೊತ್ತ 39 ರನ್​ಗಳಾಗಿದ್ದ ಲಿಟ್ಟನ್​ ದಾಸ್​ (20) ಅವರ ವಿಕೆಟ್ ​ಅನ್ನು ಮೊಹಮ್ಮದ್ ಸಿರಾಜ್ ಉರುಳಿಸಿದರು.

ಇದಾದ ನಂತರ, ಜಾಕೀರ್​ ಹಸನ್​ ಕೂಡ ತುಂಬಾ ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ. ಸಿರಾಜ್​ ಬೌಲಿಂಗ್​ನಲ್ಲಿ ರಿಷಭ್​ ಪಂತ್​ ಕೈಗೆ ಜಾಕೀರ್​ (20) ಕ್ಯಾಚ್​ ಕೊಟ್ಟು ಪೆವಿಲಿಯನ್​ ಹಾದಿ ಹಿಡಿದರು. ಇದರ ನಡುವೆ ಮುಶ್ಫಿಕರ್ ರಹೀಮ್​ಗೆ ಕ್ರೀಸ್​ ಕಚ್ಚಿ ಆಡಲು ಪ್ರಯತ್ನಿಸಿದರು. ಆದರೆ, ಅವರಿಗೂ ಸರಿಯಾದ ಸಾಥ್​ ಸಿಗಲಿಲ್ಲ. ಶಕೀಬ್​ ಅಲ್​ ಹಸನ್​ ಅವರನ್ನು 3 ರನ್​ಗಳಿಗೆ ಕುಲ್ದೀಪ್ ಯಾದವ್​ ಔಟ್​ ಮಾಡಿದರು.

ನಂತರ ಬಂದ ನೂರುಲ್ ಹಸನ್ (16) ಅವರಿಗೂ ಕುಲ್ದೀಪ್​ ಪೆವಿಲಿಯನ್​ ದಾರಿ ತೋರಿಸಿದರು. ಇದಾದ ಬಳಿಕ ಮುಶ್ಫಿಕರ್ ರಹೀಮ್​ (28) ಅವರನ್ನೂ ಕುಲ್ದೀಪ್​ ಎಲ್​ಬಿ ಬಲೆಗೆ ಕೆಡವಿದರು. ಅಲ್ಲದೇ, ತೈಜುಲ್ ಇಸ್ಲಾಂ ಅವರನ್ನು ಶೂನ್ಯಕ್ಕೆ ಬೌಲ್ಡ್​ ಮಾಡಿ ಕುಲ್ದೀಪ್ ಮತ್ತೆ​ ಶಾಕ್ ಕೊಟ್ಟರು. ಇದರಿಂದಾಗಿ ದಿನದಾಟ ಅಂತ್ಯಕ್ಕೆ ಬಾಂಗ್ಲಾ 133 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿತು. ಮೂರನೇ ದಿನದಾಟಕ್ಕೆ ಮೆಹಿದಿ ಹಸನ್ ಮಿರಾಜ್ (16*) ಮತ್ತು ಎಬಾಡೋಟ್ ಹೊಸೈನ್ (13*) ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ 10 ಓವರ್​ಗಳನ್ನು ಎಸೆದ ಕುಲ್ದೀಪ್​ 3 ಮೇಡನ್​ಗಳೊಂದಿಗೆ 33 ರನ್​ ನೀಡಿ 4 ವಿಕೆಟ್​ ಕಬಳಿಸಿ ಮಿಂಚಿದರು. ಮೊಹಮ್ಮದ್​ ಸಿರಾಜ್​ ಸಹ 9 ಓವರ್​ ಬೌಲ್​ ಮಾಡಿ 1 ಮೇಡನ್​ನೊಂದಿಗೆ ಕೇವಲ 14 ರನ್​ ನೀಡಿ 3 ವಿಕೆಟ್​ ಪಡೆದರು. ಉಮೇಶ್​ ಯಾದವ್ 1 ವಿಕೆಟ್​ ಪಡೆದರು.

ಇದನ್ನೂ ಓದಿ:India vs Bangladesh 1st test: 404 ರನ್​ಗೆ ಭಾರತ ಆಲೌಟ್​, ಬಾಂಗ್ಲಾಗೆ ಆರಂಭಿಕ ಆಘಾತ

Last Updated : Dec 15, 2022, 5:40 PM IST

ABOUT THE AUTHOR

...view details