ಕರ್ನಾಟಕ

karnataka

ETV Bharat / sports

ವಿಶಾಖದಲ್ಲಿ ಭಾರತ-ಆಸೀಸ್ ಪಂದ್ಯ; ಟಿಕೆಟ್‌ಗಾಗಿ ಮುಗಿಬಿದ್ದ ಯುವಜನತೆ - ಯುವಕರು ಟಿಕೆಟ್‌ಗಾಗಿ ಕೌಂಟರ್‌ಗಳತ್ತ ಮುಗಿಬಿದ್ದರು

Australia tour of India 2023: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆ ಆಫ್‌ಲೈನ್‌ನಲ್ಲಿ ಪ್ರಾರಂಭವಾಗಿದ್ದು, ಖರೀದಿಗೆ ಯುವಜನತೆ ಮುಗಿಬಿದ್ದ ದೃಶ್ಯ ಕಂಡುಬಂತು.

Australia tour of India 2023  ind vs aus first t20 match tickets  ind vs aus first t20 match tickets sales in vizag  ವಿಶಾಖದಲ್ಲಿ ಭಾರತ ಆಸೀಸ್ ಪಂದ್ಯ  ಟಿಕೆಟ್‌ಗಾಗಿ ಮುಗಿಬಿದ್ದ ಯುವಜನತೆ  ಆಂಧ್ರಪ್ರದೇಶದ ವಿಶಾಖಪಟ್ಟಣಂ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯ  ಪಂದ್ಯದ ಟಿಕೆಟ್‌ಗಳ ಮಾರಾಟವು ಆಫ್‌ಲೈನ್‌ನಲ್ಲಿ ಪ್ರಾರಂಭ  ಆನ್‌ಲೈನ್ ಟಿಕೆಟ್‌ಗಳ ಮಾರಾಟ ಈಗಾಗಲೇ ಪೂರ್ಣ  ಯುವಕರು ಟಿಕೆಟ್‌ಗಾಗಿ ಕೌಂಟರ್‌ಗಳತ್ತ ಮುಗಿಬಿದ್ದರು  ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ ವೇಳಾಪಟ್ಟಿ
ಟಿಕೆಟ್‌ಗಾಗಿ ಮುಗಿಬಿದ್ದ ಯುವಜನತೆ

By ETV Bharat Karnataka Team

Published : Nov 17, 2023, 12:57 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ):ನಗರದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಟಿಕೆಟ್‌ಗಳ ಮಾರಾಟ ಆಫ್‌ಲೈನ್‌ನಲ್ಲಿ ಶುರುವಾಗಿದೆ. ಇದೇ ತಿಂಗಳ 23ರಂದು ನಗರದ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆನ್‌ಲೈನ್ ಟಿಕೆಟ್‌ಗಳ ಮಾರಾಟ ಈಗಾಗಲೇ ಪೂರ್ಣಗೊಂಡಿದೆ. ಇಂದಿನಿಂದ ಆಫ್‌ಲೈನ್‌ನಲ್ಲಿ ಸೇಲ್ ನಡೆಯುತ್ತಿದ್ದು, ಕ್ರಿಕೆಟ್‌ ಪ್ರೇಮಿಗಳು ಕೌಂಟರ್‌ಗಳತ್ತ ಮುಗಿಬಿದ್ದರು.

ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತ ಯುವಜನತೆ

ಮಧುರವಾಡದ ಕ್ರಿಕೆಟ್ ಸ್ಟೇಡಿಯಂ ಜತೆಗೆ ಪುರಸಭೆ ಕ್ರೀಡಾಂಗಣ ಹಾಗೂ ಗಾಜುವಾಕ ಒಳಾಂಗಣ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ₹600, ₹1,500, ₹2,000, ₹3,000 ಮತ್ತು ₹5,000 ದರಗಳಲ್ಲಿ ಟಿಕೆಟ್‌ಗಳು ಲಭ್ಯವಿವೆ. ಟಿಕೆಟ್ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದುಂಬಾಲು ಬಿದ್ದಿದ್ದಾರೆ. ಟಿಕೆಟ್ ತ್ವರಿತವಾಗಿ ಪಡೆಯಲು ಗುರುವಾರ ರಾತ್ರಿ ಕೆಲವು ಯುವಕರು ಕ್ರೀಡಾಂಗಣದ ಸುತ್ತಲಿನ ಪ್ರದೇಶಗಳಲ್ಲಿ ಮಲಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆಯರೂ ಕೂಡಾ ಸಹ ಸರತಿ ಸಾಲಿನಲ್ಲಿ ಬಂದು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರು.

ಪಂದ್ಯದ ಟಿಕೆಟ್‌ ಪ್ರದರ್ಶಿಸಿದ ಅಭಿಮಾನಿಗಳು

ಟಿ20 ಸರಣಿ: 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಸತತ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಿತ್ತು. ಅಂತಿಮ ಪಂದ್ಯ ನವೆಂಬರ್ 19ರಂದು ನಡೆಯಲಿದೆ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.

ಟಿಕೆಟ್‌ಗಾಗಿ ನಾ ಮುಂದು, ತಾ ಮುಂದು..

ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ-ವೇಳಾಪಟ್ಟಿ:

  • ನವೆಂಬರ್​ 23 - ಮೊದಲ ಟಿ20 ಪಂದ್ಯ - ಸ್ಥಳ - ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣ - ಸಮಯ - ಸಂಜೆ 7ಕ್ಕೆ
  • ನವೆಂಬರ್ 26 - 2ನೇ ಟಿ20 ಪಂದ್ಯ - ಸ್ಥಳ - ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ - ಸಮಯ - ಸಂಜೆ 7ಕ್ಕೆ
  • ನವೆಂಬರ್ 28 - 3ನೇ ಟಿ20 ಪಂದ್ಯ - ಸ್ಥಳ - ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ - ಸಮಯ - ಸಂಜೆ 7ಕ್ಕೆ
  • ಡಿಸೆಂಬರ್ 01 - 4ನೇ ಟಿ20 ಪಂದ್ಯ - ಸ್ಥಳ - ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನ, ನಾಗ್ಪುರ - ಸಮಯ - ಸಂಜೆ 7ಕ್ಕೆ
  • ಡಿಸೆಂಬರ್ 03 - 5ನೇ ಟಿ20 ಪಂದ್ಯ - ಸ್ಥಳ - ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್ - ಸಮಯ - ಸಂಜೆ 7ಕ್ಕೆ

ABOUT THE AUTHOR

...view details