ನವದೆಹಲಿ:ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶ ಪಡೆದುಕೊಂಡಿದೆ. ವಿಶ್ವಕಪ್‌ನ ಅಂತಿಮ ಪಂದ್ಯ ಭಾನುವಾರ (ಫೆಬ್ರವರಿ 26) ಸಂಜೆ 6:30ಕ್ಕೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಂಗರೂ ಪಡೆ ಮತ್ತು ಹರಿಣಗಳ ನಡುವೆ ನಡೆಯಲಿದೆ.
ಐಸಿಸಿ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿರುವ ಆಸಿಸ್ ವನಿತೆಯರು ಮತ್ತು ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಫೈಟ್ಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್ ಆಡಲಿದೆ. ಪುರುಷರ ತಂಡ ಸೆಮಿಸ್ನಲ್ಲಿ ಸತತವಾಗಿ ಎಡವುತ್ತಿರುವುದಕ್ಕೆ ಚೋಕರ್ಸ್ ಎಂಬ ಹಣೆ ಪಟ್ಟಿ ಹೊಂದಿದೆ. ಈಗ ಫೈನಲ್ಗೆ ಪ್ರವೇಶ ಪಡೆದಿರುವ ವನಿತೆಯರು ವಿಶ್ವಕಪ್ ಗೆದ್ದು ತಾವು ಚೋಕರ್ಸ್ ಅಲ್ಲ ಎಂಬುದನ್ನು ಸಾಬೀತು ಪಡಿಸ ಬೇಕಿದೆ.
ಮಹಿಳೆಯರ ಟಿ20 ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು, ಭಾರತವನ್ನು ಮಣಿಸಿ ಸೋಲನ್ನೇ ಕಾಣದೆ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಆಸಿಸ್ನ ಈ ಸೊಲಿಲ್ಲದ ಓಟಕ್ಕೆ ಹರಿಣಗಳ ಪಡೆ ಅಪಜಯ ಉಂಟು ಮಾಡುತ್ತಾ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. 5 ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ಮತ್ತೆ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಮೊದಲ 2009 ವಿಶ್ವಕಪ್ ಅನ್ನು ಇಂಗ್ಲೆಂಡ್ ಜಯಿಸಿದರೆ, 2010,2012,2014, 2018 ಮತ್ತು 2020 ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ವಶಪಡಿಸಿಕೊಂಡಿತ್ತು. 2020 ಕೊನೆ ವಿಶ್ವಕಪ್ ಸಹ ಆಸಿಸ್ ಗೆದ್ದಿರುವ ಕಾರಣ ಮಾಜಿ ಚಾಂಪಿಯನ್ಸ್ ಮತ್ತೆ ಗೆದ್ದು ಹಾಲಿ ಚಾಂಪಿಯನ್ಗಳಾಗುತ್ತಾರ ಕಾದುನೋಡಬೇಕಿದೆ. ನಡುವೆ 2016ರಲ್ಲಿ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಗೆದ್ದುಕೊಂಡಿತ್ತು.