ಕರ್ನಾಟಕ

karnataka

ETV Bharat / sports

ಪಾಕ್​ - ಭಾರತ ಪಂದ್ಯ​: ವಿರಾಟ್​, ರಾಹುಲ್​ ಶತಕ.. ಇಂಡಿಯಾ ಸೂಪರ್​ ಕಮ್​ಬ್ಯಾಕ್​ - ETV Bharath Kannada news

ನಿನ್ನೆ ಆರಂಭವಾಗಿದ್ದ ಪಂದ್ಯ ಮಳೆಯಿಂದಾಗಿ ಮುಂದೂಡಲಾಗಿತ್ತು. ಇಂದು ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ಸಂಪೂರ್ಣ 50 ಓವರ್​ನ ಪಂದ್ಯ ನಡೆಯಲಿದೆ.

Asia Cup 2023
Asia Cup 2023

By ETV Bharat Karnataka Team

Published : Sep 11, 2023, 4:55 PM IST

Updated : Sep 11, 2023, 6:49 PM IST

ಕೊಲಂಬೊ (ಶ್ರೀಲಂಕಾ): ನಿನ್ನೆ ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದ್ದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ. ಸಂಪೂರ್ಣ 50 ಓವರ್​ಗಳನ್ನು ಆಡಿಸುವ ನಿರ್ಧಾರದೊಂದಿಗೆ ಅಂಪೈರ್​ಗಳು ಮೈದಾನಕ್ಕಿಳಿದಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದು, ಇಬ್ಬರು ಶತಕ ಪೂರೈಸಿಕೊಂಡಿದ್ದಾರೆ. ಇದರಿಂದ ಭಾರತ 320ರ ಗಡಿ ದಾಟಿದ್ದು, 350 ಪ್ಲೆಸ್​ ಗುರಿ ನೀಡುವತ್ತ ಮುಂದುವರೆದಿದೆ. ಪಾಕಿಸ್ತಾನದ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಇಬ್ಬರು ಬ್ಯಾಟರ್​ಗಳಿ ಎದುರಿಸುತ್ತಿದ್ದು, 200ಕ್ಕೂ ಹೆಚ್ಚಿನ ಜೊತೆಯಾಟ ಮುಂದುವರೆದಿದೆ. 48ನೇ ಓವರ್​ಗೆ ಭಾರತ ಎರಡು ವಿಕೆಟ್​ ನಷ್ಟಕ್ಕೆ 330ರನ್​ ಕಲೆಹಾಕಿದೆ.

ತಡವಾಗಿ ಆರಂಭವಾದ ಪಂದ್ಯ: ಇಂದು ಮುಂಜಾನೆಯೇ ಕೊಲಂಬೊದಲ್ಲಿ ಮಳೆ ಇತ್ತು. ಹೀಗಾಗಿ ಆರ್​. ಪ್ರೇಮದಾಸ ಕ್ರೀಡಾಂಗಣದ ಮೈದಾನವನ್ನು ಸಂಪೂರ್ಣ ಕವರ್​ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಬಿಡುವು ಕೊಟ್ಟಿದ್ದರಿಂದ ಪಂದ್ಯಾರಂಭದ ವಿಶ್ವಾಸ ಇತ್ತು. ಆದರೆ, 2 ಗಂಟೆ ವೇಳೆ ಮತ್ತೆ ಮಳೆ ಆರಂಭವಾಗಿ 2:35 ರವರೆಗೆ ಸುರಿದಿತ್ತು. ನಂತರ ಮತ್ತೆ 2:53 ಮಳೆ ಆರಂಭವಾದ ಹಿನ್ನೆಲೆ 3 ಗಂಟೆಗೆ ಆರಂಭ ಆಗಬೇಕಿದ್ದ ಪಂದ್ಯ ವಿಳಂಬ ಆಯಿತು. ನಂತರ ಸಂಪೂರ್ಣ ಮಳೆ ಬಿಡುವು ಕೊಟ್ಟ ಹಿನ್ನೆಲೆ 4:40ಕ್ಕೆ ಪಂದ್ಯ ಆರಂಭವಾಯಿತು.

ನಿನ್ನೆ ಮಳೆ ಆರಂಭ ಆಗುವ ವೇಳೆಗೆ ಭಾರತ 174ಕ್ಕೆ 2 ವಿಕೆಟ್​ ಕಳೆದುಕೊಂಡಿತ್ತು. ಕ್ರೀಸ್​​ನಲ್ಲಿ ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಇದ್ದರು. ಇಂದು 24.2ನೇ ಬಾಲ್​ನ್ನು ಶಾಬಾದ್​​ ಖಾನ್​ ಮಾಡುವುದರಿಂದ ಮತ್ತೆ ಇನ್ನಿಂಗ್ಸ್​ ಆರಂಭ ಆಗಿದೆ. ನಿನ್ನೆ ಆರಂಭಿಕರಾದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 121 ರನ್​ ಭರ್ಜರಿ ಜೊತೆಯಾಟ ಮಾಡಿ ವಿಕೆಟ್​ ಕೊಟ್ಟಿದ್ದರು.

ಹ್ಯಾರಿಸ್​ ರೌಫ್​ ಅಲಭ್ಯ: ಪಕ್ಕೆಲುಬಿನ ನೋವಿನಿಂದ ಬಳಲುತ್ತಿರುವ ಹ್ಯಾರಿಸ್​ ರೌಫ್​ ಇಂದು ಪಂದ್ಯ ಆಡುತ್ತಿಲ್ಲ. ಮುಂದಿನ ಪ್ರಮುಖ ಪಂದ್ಯಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಪಾಕಿಸ್ತಾನದ ಪಾಳಯದಿಂದ ಮಾಹಿತಿ ಬಂದಿದೆ. ಇಂದಿನ ವೇಗದ ವಿಭಾಗವನ್ನು ನಸೀಮ್​ ಶಾ ಮತ್ತು ಶಾಹೀನ್​ ಅಫ್ರಿದಿ ಮಾತ್ರ ನಿಭಾಯಿಸಲಿದ್ದಾರೆ. ರೌಫ್​ ಬದಲಾಗಿ ಇಫ್ತಿಕರ್​ ಅಹಮ್ಮದ್​ ಬೌಲಿಂಗ್​ ಮುಂದುವರೆಸಿದ್ದಾರೆ. ಆದರೆ, ವಿರಾಟ್​ ಮತ್ತು ರಾಹುಲ್​ ಅಬ್ಬರದ ಮುಂದೆ ಪಾಕ್​ನ ಬೌಲಿಂಗ್​ ಪ್ರಯೋಗ ಕೈ ಹಿಡಿಯುತ್ತಿಲ್ಲ.

ಇದನ್ನೂ ಓದಿ:'ಮಳೆ ನಮ್ಮನ್ನು ಉಳಿಸಿದೆ': ಏಷ್ಯಾಕಪ್‌ನ ಭಾರತ ಮತ್ತು ಪಾಕ್ ಹಣಾಹಣಿಯ ಬಗ್ಗೆ ಶೋಯೆಬ್ ಅಖ್ತರ್

Last Updated : Sep 11, 2023, 6:49 PM IST

ABOUT THE AUTHOR

...view details