ಕರ್ನಾಟಕ

karnataka

ETV Bharat / sports

Asia Cup 2023: 5 ವರ್ಷದ ಟ್ರೋಫಿ ಬರ ನೀಗಿಸಿಕೊಂಡ ಭಾರತ.. ಏಷ್ಯಾಕಪ್​ಗೆ ಭಾರತವೇ ಬಾಸ್​​ - ETV Bharath Kannada news

India vs Sri Lanka Final: ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾ ಕೊಟ್ಟಿದ್ದ ಕನಿಷ್ಠ ರನ್​ ಗುರಿಯನ್ನು ಭಾರತ 10 ವಿಕೆಟ್​ಗಳಿಂದ ಗೆದ್ದು ಬೀಗಿದೆ.

Asia Cup 2023
Asia Cup 2023

By ETV Bharat Karnataka Team

Published : Sep 17, 2023, 6:16 PM IST

Updated : Sep 17, 2023, 7:12 PM IST

ಕೊಲಂಬೊ (ಶ್ರೀಲಂಕ): ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾವನ್ನು ಭಾರತ ಮಣಿಸಿದ್ದು, 2018ರ ನಂತರ ಮತ್ತೆ ಏಷ್ಯಾಕಪ್​ನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಏಷ್ಯಾಕಪ್​ ಟ್ರೋಫಿಯನ್ನು ಎಂಟನೇ ಬಾರಿಗೆ ಜಯಿಸಿದೆ. ಲಂಕಾ ಕೊಟ್ಟ 51 ರನ್​ನ ಸಂಕ್ಷಿಪ್ತ ಗುರಿಯನ್ನು 6.1 ಓವರ್​​ನಲ್ಲಿ ವಿಕೆಟ್​ ನಷ್ಟವಿಲ್ಲದೇ ಸಾಧಿಸಿದೆ.

ಸಣ್ಣ ಮೊತ್ತವನ್ನು ಸಾಧಿಸಲು ಯುವ ಬ್ಯಾಟರ್​ಗಳಾ ದ ಶುಭಮನ್​ ಗಿಲ್​ ಮತ್ತು ಇಶಾನ್​ ಕಿಶನ್​ ಮೈದಾನಕ್ಕಿಳಿದರು. ಫಾರ್ಮ್​ನಲ್ಲಿರುವ ಇಬ್ಬರು ಆಟಗಾರರು ತಮ್ಮ ಶೈಲಿಯ ಆಟವನ್ನು ಮುಂದುವರೆಸಿದರು. 19 ಬಾಲ್​ ಎದುರಿಸಿದ ಗಿಲ್​ 6 ಬೌಂಡರಿಯ ಸಹಾಯದಿಂದ 27 ರನ್​ ಕಲೆಹಾಕಿದರೆ, 3 ಬೌಂಡರಿಯಿಂದ ಕಿಶನ್​ 23 ರನ್​ ಸೇರಿಸಿದರು. ಇದರಿಂದ ಭಾರತ ವಿಕೆಟ್​​ ನಷ್ಟವಿಲ್ಲದೆ ಗುರಿಯನ್ನು ತಲುಪಿತು. ​

22 ಓವರ್​ಗೆ ಪಂದ್ಯ ಅಂತ್ಯ:100 ಓವರ್​ಗಳ ಪಂದ್ಯ ಕೇವಲ 22 ಓವರ್​ಗಳಿಂದ ಮುಕ್ತಾಯವಾಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ವೇಗದ ಬೌಲಿಂಗ್​ ದಾಳಿಗೆ ಲಂಕಾದ ಬ್ಯಾಟರ್​ಗಳು ಒಂದಂಕಿಗೆ ಹೆಚ್ಚಿನವರು ವಿಕೆಟ್​ ಒಪ್ಪಿಸಿದರು.

ಮೊದಲ ಓವರ್​ನಲ್ಲಿ ಜಸ್ಪ್ರೀತ್​ ಬುಮ್ರಾ, ಕುಸಲ್​ ಪೆರೆರಾ (0) ವಿಕೆಟ್​ ಉರುಳಿಸಿದರು. ನಂತರ ನಾಲ್ಕನೇ ಓವರ್​ನ 1, 3, 4, 6ನೇ ಬಾಲ್ ಮತ್ತು 6ನೇ ಓವರ್​ನ 4ನೇ ಬಾಲ್​ ಹಾಗೇ 11ನೇ ಓವರ್​ನ 2ನೇ ಬಾಲ್​ನಲ್ಲಿ ಸಿರಾಜ್​ ಕ್ರಮವಾಗಿ ​ಪಾತುಮ್ ನಿಸ್ಸಾಂಕ (2), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವಾ (4), ದಸುನ್ ಶನಕ (0) ಮತ್ತು ಕುಸಲ್ ಮೆಂಡಿಸ್ (17) ವಿಕೆಟ್ ಪಡೆದರು.

ನಂತರ ಹಾರ್ದಿಕ್​ ಪಾಂಡ್ಯ 13 ಮತ್ತು 16ನೇ ಓವರ್​ನಲ್ಲಿ ಮೂರು ವಿಕೆಟ್​ ಪಡೆದರು. 12.3 ಓವರ್​ನಲ್ಲಿ ದುನಿತ್ ವೆಲ್ಲಲಾಗೆ 8 ರನ್​ಗೆ ಔಟ್​ ಆದರು. 15.1 ಮತ್ತು 15.2 ಬಾಲ್​ನಲ್ಲಿ ಬಾಲಂಗೋಚಿಗಳಾದ ಪ್ರಮೋದ್ ಮದುಶನ್, ಮತೀಶ ಪತಿರಾನ ವಿಕೆಟ್​ ಕೊಟ್ಟರು. ಹೀಗಾಗಿ ಲಂಕಾ 15.2 ಓವರ್​ನಲ್ಲಿ 50 ರನ್​ ಗಳಿಸಿ ಆಲ್​ಔಟ್​ಗೆ ಶರಣಾಯಿತು.

ಭಾರತದ ಇನ್ನಿಂಗ್ಸ್​ನಲ್ಲಿ ನಿರ್ಮಾಣವಾದ ದಾಖಲೆಗಳು:

  • ಫೈನಲ್​ ಪಂದ್ಯದಲ್ಲಿ ಎರಡನೇ ಬಾರಿಗೆ ಭಾರತ ತಂಡ 10 ವಿಕೆಟ್​ಗಳ ಗೆಲುವು ದಾಖಲಿಸಿದೆ. ​1998 ರಲ್ಲಿ ಲಂಕಾ, ಭಾರತ ಮತ್ತು ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿಯ ಫೈನಲ್​ನಲ್ಲಿ ಭಾರತ 197 ರನ್​ನ ಗುರಿಯನ್ನು ಶೂನ್ಯ ವಿಕೆಟ್​ ನಷ್ಟದಲ್ಲಿ ಸಾಧಿಸಿತ್ತು. 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್​ ನಡುವಿನ ತ್ರಿಕೋನ ಸರಣಿ ಆಸಿಸ್​ನಲ್ಲಿ ನಡೆದಿತ್ತು. ಇದರ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಕೊಟ್ಟಿದ್ದ 118 ರನ್​ನ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್​ ನಷ್ಟವಿಲ್ಲದೇ ಸಾಧಿಸಿತ್ತು.
  • ಭಾರತ ತಂಡ ಈ ಫೈನಲ್​ ಪಂದ್ಯವನ್ನು 263 ಬಾಲ್​ಗಳನ್ನು ಉಳಿಸಿಜಕೊಂಡು ಗೆದ್ದಿದೆ. ಇದು ಭಾರತದ ಮಟ್ಟಿಗೆ ಹೆಚ್ಚು ಬಾಲ್​ ಉಳಿಸಿಕೊಂಡು ಗೆದ್ದ ಮೊದಲ ಪಂದ್ಯವಾಗಿದೆ.
  • ಏಕದಿನ ಮಾದರಿಯ ಫೈನಲ್​ನಲ್ಲಿ 2002 -03 ರಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್​ ನಡುವಿನ ತ್ರಿಕೋನ ಸರಣಿಯಲ್ಲಿ ಆಸಿಸ್​ 226 ಬಾಲ್​ ಉಳಿಸಿ ಗೆದ್ದಿರುವುದು ಎರಡನೇ ದಾಖಲೆ ಆಗಿದೆ.

ಇದನ್ನೂ ಓದಿ:Asia Cup Final: ಸಿರಾಜ್ ಬೌಲಿಂಗ್​ ದಾಳಿಗೆ ಲಂಕಾ ತತ್ತರ.. 15 ಓವರ್​ನಲ್ಲಿ, ಕೇವಲ 50 ರನ್​ ಗಳಿಸಿ ಸಿಂಹಳೀಯರು ಆಲ್​ಔಟ್​​

Last Updated : Sep 17, 2023, 7:12 PM IST

ABOUT THE AUTHOR

...view details